ಬಂಟ್ವಾಳ : ತಾಲೂಕಿನ ವಾಮದಪದವಿನಲ್ಲಿ ಬೃಹತ್ ಮರವೊಂದು ದರೆಗುರುಳಿ ಸ್ಥಳೀಯ ನಿವಾಸಿಯೊಬ್ಬರು ಮರದಡಿಗೆ ಸಿಲುಕಿಕೊಂಡಿರುವ ಘಟನೆ ಇಂದು ಸಂಜೆ ವಾಮದಪದವು ಪೇಟೆಯಲ್ಲಿ ನಡೆದಿದೆ.

ಬೃಹತ್ ಮರದಡಿಯಲ್ಲಿ ಸಿಲುಕಿಕೊಂಡಿರುವ ವ್ಯಕ್ತಿಯನ್ನು ಸ್ಥಳೀಯರ ಸಹಕಾರದಿಂದ ಹೊರತೆಗೆದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸ್ಥಳೀಯರ ಸಹಕಾರದಿಂದ ಮರತೆರವು ಕಾರ್ಯಚರಣೆ ನಡೆಯುತ್ತಿದ್ದು ಹತ್ತಿರದಲ್ಲಿದ್ದ ಮನೆಗೂ ಹಾನಿಯಾಗಿದೆ. ವಿದ್ಯುತ್ ಕಂಬಗಳೂ ದರೆಗುರುಳಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡು ಮೆಸ್ಕಾಂ ಸಿಬ್ಬಂದಿಗಳೂ ಹರಸಾಹಸ ಪಡುವಂತಾಗಿದೆ.

ವಾಮದಪದವು ಸುತ್ತಮುತ್ತ ಇಂತಹ ಹಲವಾರು ಮರಗಳಿದ್ದು ಅಪಾಯಕಾರಿಯಾಗಿದೆ ಈ ಮರವನ್ನು ಸಂಭಂದಪಟ್ಟ ಅಧಿಕಾರಿಗಳು ತೆರವು ಗೊಳಿಸಬೇಕೆಂದು ಸ್ಥಳೀಯರ ಆಕ್ರೋಶವಾಗಿದೆ.

ಇಂದು ಬಂಟ್ವಾಳ ಮೂಡಬಿದ್ರೆ ರಸ್ತೆಯ ಎಸ್. ವಿ. ಎಸ್ ಕಾಲೇಜು ಬಳಿಯೂ ಮರ ಬಿದ್ದು ವಾಹನ ಸಂಚಾರಕ್ಕೆ ಒಂದೂವರೆ ತಾಸು ಅಡಚಣೆ ಉಂಟಾಗಿದ್ದು ಈ ಮುಖ್ಯ ರಸ್ತೆಯ ಬದಿಯಲ್ಲಿ ಹಲವಾರು ಮರಗಳು ಅಪಾಯದ ಅಂಚಿನಲ್ಲಿದ್ದು ಮರ ತೆರವುಗೊಳಿಸುವ ಕಾರ್ಯವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಡಬೇಕಾಗಿದೆ.

ಕಳೆದ ಮಳೆಗಾಲದಲ್ಲಿ ಅಪಾಯಕಾರಿ ಮರಗಳಿದ್ದರೆ ಅರಣ್ಯ ಇಲಾಖೆಗೆ ತಿಳಿಸಿ ಎಂಬ ಸಂದೇಶ ರವಾಣೆಯಾಗಿತ್ತು ಅದರಂತೆ ಸ್ಥಳೀಯರು ಅಂತಹ ಮರಗಳ ಮಾಹಿತಿ ನೀಡಿದ್ದರೂ ಮರಗಳ ತೆರವು ಕಾರ್ಯ ಈ ಮಳೆಗಾಲಕ್ಕೂ ಸಾಧ್ಯವಾಗಿಲ್ಲ.
ಸಂಭಂದಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಇಂತಹ ಅಪಾಯಕಾರಿ ಮರಗಳನ್ನು ತಕ್ಷಣೆವೇ ತೆರವು ಗೊಳಿಸುವ ಕಾರ್ಯ ಮಾಡಿ ಸಾರ್ವಜನಿಕರಿಗೆ ಆಗುವಂತಹ ತೊಂದರೆಯನ್ನು ಸರಿಪಡಿಸಬೇಕೆಂಬುದು ಎಲ್ಲರ ಒತ್ತಾಯವಾಗಿದೆ.


