Breaking
13 Jul 2026, Mon

ಉಡುಪಿ: ಮಲ್ಪೆ ಬಂದರಿನ ಸಮುದ್ರದಲ್ಲಿ ಮೀನುಗಾರ ಬಿದ್ದು ನಾಪತ್ತೆ

ಉಡುಪಿ: ಮಲ್ಪೆ ಬಂದರಿನ ಸಮೀಪ ಮೀನುಗಾರಿಕೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ ಮೀನುಗಾರನೊಬ್ಬ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿರುವ ಘಟನೆ ಮೇ 17 ರಂದು ಸಂಭವಿಸಿದೆ.

ನಾಪತ್ತೆಯಾದವರನ್ನು ಸಂಶಿ ಗ್ರಾಮದ ಕುರುಬರ ಓಣಿಯ ಶಂಕರಗೌಡ ಶಿವಪ್ಪ ಆಡೂರು (26) ಎಂದು ಗುರುತಿಸಲಾಗಿದೆ. ಅವರು ಮಲ್ಪೆಯ ಜೈ ಸಂತೋಷಿ ಮಾತಾ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದರು.

ಪೊಲೀಸರ ಮಾಹಿತಿ ಪ್ರಕಾರ, ಅವರು ಸಮುದ್ರದಲ್ಲಿ ಮೀನುಗಾರಿಕಾ ಬಲೆಯನ್ನು ಎಳೆಯುತ್ತಿದ್ದ ವೇಳೆ ದೋಣಿಯ ಚಲನೆಯಿಂದ ಸಮತೋಲನ ಕಳೆದುಕೊಂಡು ಜಾರಿ ನೀರಿಗೆ ಬಿದ್ದಿದ್ದಾರೆ. ಬಳಿಕ ಅವರು ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ನಾಪತ್ತೆಯಾದ ಮೀನುಗಾರನ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಮಲ್ಪೆ ಪೊಲೀಸ್ ಠಾಣೆ, ಮಲ್ಪೆ ಪಿಎಸ್‌ಐ ಅಥವಾ ಮಲ್ಪೆ ವೃತ್ತ ನಿರೀಕ್ಷಕರನ್ನು ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

Leave a Reply

Your email address will not be published. Required fields are marked *