Breaking
26 May 2026, Tue

ಕಲ್ಲಡ್ಕದಲ್ಲೊಂದು ಐದು ತಲೆಮಾರಿನ ಅಪರೂಪದ ಕುಟುಂಬ

ಕಲ್ಲಡ್ಕ: ಬಂಟ್ವಾಳ ತಾಲೂಕಿನ ಕಲ್ಲಡ್ಕ ಕುದ್ರಬೆಟ್ಟುವಿನಲ್ಲಿ ಐದು ತಲೆಮಾರಿನ ಅಪರೂಪದ ಕುಟುಂಬ ಒಂದು ಮಾತೃನಮನ ಎನ್ನುವ ಸಂಭ್ರಮವನ್ನು ಮೇ 24ನೇ ಆದಿತ್ಯವಾರ ಕಲ್ಲಡ್ಕ ಕುದ್ರಬೆಟ್ಟುವಿನಲ್ಲಿ ಆಚರಿಸಿಕೊಂಡಿದೆ.

ಹೆತ್ತು,ಹೊತ್ತು,ಸಾಕಿ ಸಲಹಿ ಮೊದಲ ಗುರು ಸ್ಥಾನದಲ್ಲಿ ನಿಲ್ಲುವ ತಾಯಿ ಹೃದಯ ತನ್ನ ಮಕ್ಕಳನ್ನು ಪ್ರೀತಿಸುತ್ತಲೇ ಇರುತ್ತದೆ. ಎಷ್ಟೇ ಕಷ್ಟ ಇದ್ದರು ತಾನು ಉಪವಾಸ ಇದ್ದರೂ ತನ್ನ ಮಕ್ಕಳನ್ನು ಮಡಿಲಲ್ಲಿ ಮಲಗಿಸಿ ತನ್ನ ಕಷ್ಟವನ್ನು ತಾನೇ ನುಂಗಿಕೊಂಡು ಮಕ್ಕಳನ್ನು ಹಸಿವು ಮುಕ್ತ ಮಾಡುತ್ತಾಳೆ. ಮಕ್ಕಳಲ್ಲಿ ಹಲವಾರು ಕನಸುಗಳನ್ನು ಕಾಣುತ್ತಾ ಸಮಾಜದಲ್ಲಿ ಮಾದರಿಯಾಗಿ ಜೀವಿಸುವಲ್ಲಿ ಶ್ರಮಿಸುತ್ತಾಳೆ. ಇಂತಹ ತಾಯಿಯ ಸ್ಥಾನದಲ್ಲಿ ನಿಂತಿರುವವರೆ ವೆಂಕಮ್ಮ ಪೂಜಾರಿ ಕುಧ್ರೆಬೆಟ್ಟು (98)

ವೆಂಕಮ್ಮ ಪೂಜಾರಿಯವರ ಮಗಳು ಮೋನಮ್ಮ (75) ನೇರಳಕಟ್ಟೆಯ ಕೊಪ್ಪರಿಗೆ ಎಂಬಲ್ಲಿ ವಾಸಿಸುತ್ತಿದ್ದು ಮೋನಮ್ಮ ರವರ ಮಗಳು ನೀಲಾಕ್ಷಿ (52) ಕಡೇಶಿವಾಲಯದಲ್ಲಿ ವಾಸಿಸುತ್ತಿದ್ದು, ನೀಲಾಕ್ಷಿರವರ ಮಗಳು ದೀಪ್ತಿ (26) ಶನಿವಾರ ಸಂತೆ ಎಂಬಲ್ಲಿ ವಾಸಿಸುತ್ತಿದ್ದಾರೆ. ದೀಪ್ತಿಯವರ ಪುತ್ರಿ ರಿಯಾಂಶಿ 2 ತಿಂಗಳ ಮಗು.

ಈ ರೀತಿ 5 ತಲೆಮಾರಿನ ಎಲ್ಲರನ್ನು ಕುಟುಂಬದವರು ಕಲ್ಲಡ್ಕ ಕುದ್ರೆಬೆಟ್ಟುವಿನಲ್ಲಿ ಸೇರಿಸಿ ಮಾತೃನಮನ ಎನ್ನುವ ವಿಶೇಷ ಕಾರ್ಯಕ್ರಮವನ್ನು ಆಚರಿಸಿಕೊಂಡರು.

Leave a Reply

Your email address will not be published. Required fields are marked *