Breaking
25 May 2026, Mon

ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ.) ಮಿಜಾರು ವತಿಯಿಂದ 72ನೇ ಮಾಸಿಕ ಸೇವಾ ಯೋಜನೆ ಹಸ್ತಾಂತರ

ಸರಿಪಲ್ಲ ನಿವಾಸಿ ಶಶಿಕಲಾ ಅವರು ಕಳೆದ ಕೆಲವು ತಿಂಗಳಿಂದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಈಗಾಗಲೇ ಸಾಲ ಮಾಡಿ ಆಸ್ಪತ್ರೆ ವೆಚ್ಚವನ್ನು ಭರಿಸಿಕೊಂಡಿದ್ದಾರೆ. ಮುಂದಿನ ಚಿಕಿತ್ಸೆಗೆ ಹೆಚ್ಚಿನ ಮೊತ್ತದ ಅಗತ್ಯವಿರುವ ಹಿನ್ನೆಲೆಯಲ್ಲಿ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್’ (ರಿ) ಮಿಜಾರು ತಂಡದ ಮೂಲಕ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು.

ಇವರ ಮನವಿಗೆ ಸ್ಪಂದಿಸಿದ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ.) ಮಿಜಾರು ವತಿಯಿಂದ ₹15,000 ಮೊತ್ತದ ಚೆಕ್ಕನ್ನು ತಂಡದ ಅಧ್ಯಕ್ಷರಾದ ಸಂದೀಪ್ ಮಿಜಾರ್ ಅವರ ಹಸ್ತದಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ದಯಾನಂದ ಉರ್ಕಿ ಉಪಸ್ಥಿತರಿದ್ದರು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ದಾನಿಗಳಿಗೂ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್’ (ರಿ) ಮಿಜಾರು ಕಾರ್ಯವಿಭಾಗ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಗಿದೆ.

Leave a Reply

Your email address will not be published. Required fields are marked *