ಬಂಟ್ವಾಳ: ಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್ ಬಂಟ್ವಾಳ ನೇತ್ರಾವತಿ ಸಂಗಮದ ನೂತನ ಅಧ್ಯಕ್ಷರಾಗಿ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ತಾರಾನಾಥ ಕೊಟ್ಟಾರಿ ಆಯ್ಕೆಯಾಗಿದ್ದಾರೆ.

ಸಂಸ್ಥೆಯ ಪದವಿ ಪ್ರಧಾನ ಸಮಾರಂಭವು ಇಂದು (ಮೇ 18) ಬಿ.ಸಿ.ರೋಡು ಕೈಕಂಬ ದ್ವಾರದಲ್ಲಿರುವ ಅಕ್ಷಯ ಸೌಧದ ಅಕ್ಷಯ ಸಭಾಂಗಣದಲ್ಲಿ ನಡೆಯಲಿದೆ. ಬಿ.ಸಿ.ರೋಡಿನ ಉದ್ಯಮಿ ಐತ್ತಪ್ಪ ಆಳ್ವ ಸುಜೀರುಗುತ್ತು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ರಾಷ್ಟ್ರೀಯ ಉಪಾಧ್ಯಕ್ಷೆ ಅಕ್ಷತಾ ಆರ್. ಗೌರವ ಅತಿಥಿಯಾಗಿ ಉಪಸ್ಥಿತರಿರುವರು ಎಂದು ನಿಕಟಪೂರ್ವ ಅಧ್ಯಕ್ಷ ಆದಿರಾಜ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಸ್ಥೆಯ ಕಾರ್ಯದರ್ಶಿಯಾಗಿ ರೇಖಾ ರಾವ್, ಜೊತೆ ಕಾರ್ಯದರ್ಶಿಯಾಗಿ ಸನ್ಮತಿ ಜೈನ್ ಇಂದ್ರ, ಕೋಶಾಧಿಕಾರಿಯಾಗಿ ಪಿ. ಮೊಹಮ್ಮದ್, ಉಪಾಧ್ಯಕ್ಷರಾಗಿ ಪುರುಷೋತ್ತಮ ಕೊಟ್ಟಾರಿ ಹಾಗೂ ಜಯಗಣೇಶ ದಾಸಕೋಡಿ, ನಿರ್ದೇಶಕರಾಗಿ ಜಯಾನಂದ ಪೆರಾಜೆ ಮತ್ತು ಡಾ. ಆನಂದ ಬಂಜನ್ ಪದಾಧಿಕಾರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು.
ನೂತನ ಸದಸ್ಯರಾಗಿ ರಾಜಾರಾಮ ಐತಾಳ್, ಗ್ರೇಸಿ ಮೇಬಲ್ ಲಸ್ರಾದೊ, ಅಶೋಕ್ ಕುಮಾರ್ ಬರಿಮಾರು, ಗಿರಿಧರ ಗೌಡ, ಶೋಭಾ ಶೆಟ್ಟಿ ಹಾಗೂ ಪ್ರಮೀಳ ಮಾಣೂರು ಸಂಸ್ಥೆಗೆ ಸೇರ್ಪಡೆಗೊಳ್ಳಲಿದ್ದಾರೆ.


