ಬಂಟ್ವಾಳ: ಸಜೀಪ ನಡು ಕ್ಷೇತ್ರದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ಶಕ್ತಿ ಗಣಪತಿ ಷಣ್ಮುಖ ಸುಬ್ರಹ್ಮಣ್ಯ ಭಜನಾ ಮಂಡಳಿಯ 23ನೇ ವರ್ಷದ ಏಕಾಹ ಭಜನಾ ಮಹೋತ್ಸವವು ಶನಿವಾರ ಭಕ್ತಿಭಾವದಿಂದ ಆರಂಭಗೊಂಡಿತು.

ಸೂರ್ಯೋದಯ ಸಮಯದಲ್ಲಿ ದೀಪ ಬೆಳಗಿಸುವ ಮೂಲಕ ಮಹೋತ್ಸವಕ್ಕೆ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಅರ್ಚಕ ಗಣಪತಿ ಮಹಾಬಲೇಶ್ವರ ಭಟ್, ಕೋಚ ಪೂಜಾರಿ ಯಾನೆ ಶಂಕರ ಪೂಜಾರಿ, ಸುರೇಶ್ ಬಂಗೇರ, ಗಂಗಾಧರ, ಸುಧಾಕರ ಕೇಟಿ, ರಾಮ ಬರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.




