Breaking
15 May 2026, Fri

ಉಳ್ಳಾಲ್ತಿ ಶ್ರೀ ನಾಲ್ಕೈತಾಯ ಸನ್ನಿಧಿಯಲ್ಲಿ ವೃಷಭ ಸಂಕ್ರಮಣದ ವಿಶೇಷ ಸೇವಾಪೂಜೆ

ಬಂಟ್ವಾಳ: ಸಜೀಪಮಾಗಣೆ ಅಗರಿ ಮಾಡ ಆಲಾಡಿ ಖಾನನಡಿಯೇಲು ದೈವಂಗಳ ಉಳ್ಳಾಲ್ತಿ ಶ್ರೀ ನಾಲ್ಕೈತಾಯ ಸನ್ನಿಧಿಯಲ್ಲಿ ವೃಷಭ ಸಂಕ್ರಮಣ ಪ್ರಯುಕ್ತ ವಿಶೇಷ ಸೇವಾಪೂಜೆ ಭಕ್ತಿಭಾವದಿಂದ ಜರುಗಿತು.

ಸಜೀಪಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಬಟ್ ಅವರ ನೇತೃತ್ವದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಜೀವನ್ ಆಳ್ವ, ರಮೇಶ್ ಅನ್ನಪ್ಪ ಡಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *