ಮಂಗಳೂರು: ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ವತಿಯಿಂದ ಸ್ವಸ್ತಿಕ ವಾಟರ್‌ಫ್ರಂಟ್, ಸುಲ್ತಾನ್ ಬತ್ತೇರಿ ನಲ್ಲಿ ಆಯೋಜಿಸಲಾದ ಅಂತರ್ ಕಾಲೇಜು ಉತ್ಸವ “SPARK 2K26” ಯಶಸ್ವಿಯಾಗಿ ನೆರವೇರಿತು. 10ಕ್ಕೂ ಹೆಚ್ಚು ಕಾಲೇಜುಗಳಿಂದ 250ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ, ಕಾರ್ಯಕ್ರಮಕ್ಕೆ ಮೆರಗು ನೀಡಿದರು.

ಕಾರ್ಯಕ್ರಮವನ್ನು ಶ್ರೀ ರಾಘವೇಂದ್ರ ರಾವ್ ಉದ್ಘಾಟಿಸಿದರು. ಪ್ರಾಂಶುಪಾಲೆ ಡಾ. ಮಾಲಿನಿ ಎನ್ ಹೆಬ್ಬಾರ್ ಸ್ವಾಗತ ಕೋರಿದರು. ನಂತರ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮುಳಿಯ ಸಾತ್ವಿಕ್ ಪರಿಚಯ ಭಾಷಣ ಮಾಡಿದರು. ಸಂಸ್ಥೆಯ ಅಧ್ಯಕ್ಷರಾದ ಡಾ. ರಾಘವೇಂದ್ರ ಹೊಳ್ಳ ಎನ್ ಅಧ್ಯಕ್ಷೀಯ ಭಾಷಣ ನೀಡಿದರು.

ವಿವಿಧ ಸ್ಪರ್ಧೆಗಳು ನಡೆದವು. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ತೋರಿಸಿದರು. ಈ ಸ್ಪರ್ಧೆಯಲ್ಲಿ SDM ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್, ಮಂಗಳೂರು ಒಟ್ಟಾರೆ ಚಾಂಪಿಯನ್ ಪಟ್ಟವನ್ನು ಗೆದ್ದಿತು.

ಸಮಾರೋಪ ಸಮಾರಂಭದಲ್ಲಿ ಡಾ. ಫ್ರಾನ್ಸಿಸ್ಕಾ ತೇಜ್ ಮತ್ತು ಡಾ. ಸುಪ್ರಿತಾ ಆರ್ ಕೆ ಮಾತನಾಡಿದರು. ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು. ಕೊನೆಯಲ್ಲಿ ಮುಳಿಯ ಸಾತ್ವಿಕ್ ಧನ್ಯವಾದ ಅರ್ಪಿಸಿದರು. ಈ ಕಾರ್ಯಕ್ರಮವು ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮುಳಿಯ ಸಾತ್ವಿಕ್ ಅವರ ನೇತೃತ್ವದಲ್ಲಿ, ಸಿಂಚನಾ, ಸಿಂಧು ಎಂ, ಸುದೀಪ್ ಪ್ರಭು ಮತ್ತು ಪೂಜಾ ಆಚಾರ್ಯ ಅವರ ಸಹಕಾರದಿಂದ ಯಶಸ್ವಿಯಾಗಿ ನಡೆಯಿತು.


