ಸಜೀಪಮೂಡ: ಸುಭಾಷ್ ಯುವಕ ಮಂಡಲ (ರಿ.) ಹಾಗೂ ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿ, ಸುಭಾಷ್ ನಗರ, ಸಜೀಪಮೂಡ ಇವರ ಆಶ್ರಯದಲ್ಲಿ ಅ.17ರಿಂದ 22ರವರೆಗೆ ನಡೆಯಲಿರುವ ಶ್ರೀ ಶಾರದಾ ಪೂಜಾ ಶತಮಾನೋತ್ಸವದ ಅಂಗವಾಗಿ ಚಪ್ಪರ ಮುಹೂರ್ತ ಕಾರ್ಯಕ್ರಮವು ವಿಧಿವತ್ತಾಗಿ ನೆರವೇರಿತು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಲಿರುವ ‘ಸಜೀಪ ದಸರಾ–2026’ರ ಪೂರ್ವಭಾವಿಯಾಗಿ ನಡೆದ ಚಪ್ಪರ ಮುಹೂರ್ತದಲ್ಲಿ ಸಜೀಪ ಮಾಘಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾರದಾ ಪೂಜಾ ಮಹೋತ್ಸವ ಸಮಿತಿ ಅಧ್ಯಕ್ಷ ಬಿ ಶೋಭಿತ್ ಪೂಂಜ, ಸುಭಾಷ್ ಯುವಕ ಮಂಡಲ ಅಧ್ಯಕ್ಷ ಎಸ್ ಶ್ರೀಕಾಂತ ಶೆಟ್ಟಿ, ಉಪಾಧ್ಯಕ್ಷ ಗಿರೀಶ್ ಕುಮಾರ್ ಪೆರ್ವ, ಅಶ್ವಿತ್ ಬೆಂಕ್ಯ, ಕಾರ್ಯದರ್ಶಿ ಕಿಶೋರ್ ಪೂಜಾರಿ ಅಗರಿ, ಶಾಲಾ ಮುಖ್ಯೋಪಾಧ್ಯಾಯ ಗೋಪಾಲ ಸಪಲ್ಯ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷಚಂದ್ರಶೇಖರ ಎನ್ ಬಿ ಬೊಕ್ಕಸ, ಮಹಿಳಾ ಸಮಿತಿ ಅಧ್ಯಕ್ಷ ಪುಷ್ಪಾವತಿ ರಮೇಶ್ ಪೆರ್ವ, ಉಪಾಧ್ಯಕ್ಷ ಮಮತಾ ಆನಂದ ಶೆಟ್ಟಿ ಪರಾರಿ ಗುತ್ತು, ಪ್ರಮುಖರಾದ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಯಶವಂತ ಪೂಜಾರಿ ದೇರಾಜೆಗುತ್ತು, ಪಂಚಾಯತ್ ಮಾಜಿ ಅಧ್ಯಕ್ಷ ವಿಶ್ವನಾಥ ಬೆಳ್ಚಡ ಕೆ, ಬಂಟ್ವಾಳ ತಾಲೂಕು ಪಿಡಬ್ಲ್ಯೂಡಿ ಗುತ್ತಿಗೆದಾರ ಸಂಘ ಅಧ್ಯಕ್ಷ ಶೈಲೇಶ್ ಪೂಜಾರಿ ಕೆ, ಚಂದ್ರಶೇಖರ ಶೆಟ್ಟಿ ನೀಲಿಯ, ರತ್ನಾಕರ್ ಪೂಜಾರಿ ನಾಡಾರ್, ರಮೇಶ್ ಕುಲಾಲ್ ಪಣೋಲಿ ಬೈಲು, ರಮೇಶ್ ಅನ್ನಪ್ಪಾಡಿ, ವಿಶ್ವನಾಥ ಕೊಟ್ಟಾರಿ, ಹರೀಶ್ ನಾಯಕ, ಹರೀಶ್ ಗಟ್ಟಿ, ಗೋಕುಲ್ ಭಂಡಾರಿ, ಶುಭರಾಜ್ ಶೆಟ್ಟಿ, ಶ್ರೀನಾಥ ಶೆಟ್ಟಿ, ಗಣೇಶ ಶೆಟ್ಟಿ ಸಜಿಪ ಗು ತ್ತು,ಬಜನಾ ಸಮಿತಿಯ ಪ್ರಮುಖರಾದ ಯೋಗೀಶ್ ಬೆಳ್ಚಡ ಕೂಡೂರು, ವಸಂತ ಪೂಜಾರಿ ಬರ್ಕೆ, ಚೆನ್ನಪ್ಪ ಪೂಜಾರಿ ಒಳಗುಡ್ಡೆ, ಸಂತೋಷ್ ಬೆಂಕ್ಯ, ಮೊದಲಾದವರು ಉಪಸ್ಥಿತರಿದ್ದರು.



