Breaking
21 Jun 2026, Sun

ಕೊಲೆ, ದರೋಡೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ “ಗರುಡ ಗ್ಯಾಂಗ್” ಸದಸ್ಯನ ಬಂಧನ

ಉಡುಪಿ: ಕೊಲೆ, ದರೋಡೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ “ಗರುಡ ಗ್ಯಾಂಗ್” ನ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬೈಂದೂರು ತಾಲ್ಲೂಕಿನ ಕಿರಿಮಂಜೇಶ್ವರ ಗ್ರಾಮದ ಅರೆಹೊಳೆ ಕ್ರಾಸ್‌ನ ಜನತಾ ಕಾಲೋನಿಯ ನಿವಾಸಿ ರೌಡಿಶೀಟರ್ ಮೊಹಮ್ಮದ್ ಅಲ್ಫಾಜ್ (25 ವ) ಎಂದು ಗುರುತಿಸಲಾಗಿದೆ.

ಅಲ್ಫಾಜ್ ಕುಖ್ಯಾತ “ಗರುಡ ಗ್ಯಾಂಗ್” ನ ಸಕ್ರಿಯ ಸದಸ್ಯನಾಗಿದ್ದ ಈತ ಎರಡು ಕೊಲೆ ಯತ್ನ, ಒಂದು ದರೋಡೆ, ಒಂದು ದರೋಡೆ ಯತ್ನ, ಒಂದು ಹಲ್ಲೆ, ಎರಡು ಅಕ್ರಮ ಸಭೆ, ಒಂದು ಅಪಹರಣ ಮತ್ತು ಮಾದಕವಸ್ತು ಮಾರಾಟಕ್ಕೆ ಸಂಬಂಧಿಸಿದ NDPS ಕಾಯ್ದೆಯಡಿ ಒಂದು ಪ್ರಕರಣ ಸೇರಿದಂತೆ ಶಿರ್ವ, ಗಂಗೊಳ್ಳಿ, ಬೈಂದೂರು, ಉಡುಪಿ ಪಟ್ಟಣ, ಕುಂದಾಪುರ ಗ್ರಾಮಾಂತರ, ಕುಂದಾಪುರ ಪಟ್ಟಣ ಮತ್ತು ಭಟ್ಕಳ ಪಟ್ಟಣ ಸೇರಿದಂತೆ ಹಲವಾರು ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಪ್ರಕರಣಗಳು ದಾಖಲಾಗಿವೆ.

ಉಡುಪಿ ಜಿಲ್ಲಾ ಜಿಲ್ಲಾಧಿಕಾರಿ ಅವರ ಆದೇಶದ ಮೇರೆಗೆ, ಏ. 24 ರಂದು ಈತನನ್ನು ಬಂಧಿಸಿ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಇರಿಸಲಾಗಿದೆ.

Leave a Reply

Your email address will not be published. Required fields are marked *