ಬಂಟ್ವಾಳ : ಸೌತ್ ಆಫ್ರಿಕಾದ ಬೋಟ್ಸ್ ವಾನ ದಲ್ಲಿ ಮೇ 2 ರಂದು ನಡೆಯಲಿರುವ ವಿಶ್ವ ರಿಲೇ ಚಾಂಪಿಯ ನ್ ಶಿಪ್ ಸ್ಪರ್ಧೆಯಲ್ಲಿ ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಕೊಯಿಲ ನಿವಾಸಿ, ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಹಳೇ ವಿದ್ಯಾರ್ಥಿ ತೀರ್ಥೇಶ್ ಶೆಟ್ಟಿ ಅವರು ಪುರುಷರ 4×400 ಮೀ ರಿಲೇಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.


ಪ್ರಸ್ತುತ ಅವರು ಭಾರತೀಯ ರೈಲ್ವೇ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದು, ಭಾರತದ ರಾಷ್ಟ್ರೀಯ ಸೀನಿಯರ್ ಕ್ಯಾಂಪ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ತೀರ್ಥೇಶ್ ಅವರು ಕೊಯಿಲ ಪ್ರಶಾಂತ್ ಶೆಟ್ಟಿ, ಸವಿತ ದಂಪತಿಯ ಪುತ್ರರಾಗಿದ್ದಾರೆ.




