Breaking
5 Aug 2026, Wed

ಮಹಿಳಾ ಶಕ್ತಿ ಮಸೂದೆಗೆ ವಿರೋಧ ಪಕ್ಷದಿಂದ ತಡೆ ಖಂಡನೀಯ : ಸುಲೋಚನಾ ಭಟ್

ಮಂಗಳೂರು: ಮಹಿಳೆಯರಿಗೆ ಲೋಕಸಭೆ -ಹಾಗೂ ವಿಧಾನಸಭೆಗಳಲ್ಲಿ ಶೇ 33% ಮೀಸಲಾತಿ ನೀಡಲು ಕೇಂದ್ರ ಸರ್ಕಾರ ಇರಿಸಿರುವ ಹೆಜ್ಜೆ ಐತಿಹಾಸಿಕವಾಗಿದ್ದು ಈ ಸಾಂವಿಧಾನಿಕ ತಿದ್ದುಪಡಿಗೆ ವಿರೋಧ ಪಕ್ಷಗಳು ಬೆಂಬಳ ನೀಡದೆ ನಾರಿಶಕ್ತಿ ವಂದನ್ ಮಸೂದೆ ಜಾರಿಗೆ ತಡೆಯೊಡ್ಡಿರುವ ವಿರೋಧ ಪಕ್ಷಗಳ ನಿಲುವು ಅತ್ಯಂತ ಖಂಡನೀಯ ಎಂದೂ ಬಿಜೆಪಿ ರಾಜ್ಯ ಸಮಿತಿಯ ಮಾಜಿ ಉಪಾಧ್ಯಕ್ಷೆ, ಬಿಜೆಪಿ ಮುಖಂಡರಾದ ಸುಲೋಚನಾ ಜಿ. ಕೆ. ಭಟ್ ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮಸೂದೆಯನ್ನು ತಿರಸ್ಕರಿಸಿ ಸಂಭ್ರಮಿಸುತ್ತಿರುವ ವಿರೋಧ ಪಕ್ಷಗಳ ಮನಸ್ಥಿತಿ ದೇಶದಲ್ಲಿ ಇರುವ 50%ಕ್ಕೂ ಹೆಚ್ಚು ಮಹಿಳೆಯರಿಗೆ ಮಾಡಿರುವ ಅವಮಾನವಾಗಿದೆ. ಮಹಿಳೆಯರು ಎಂದಿಗೂ ವಿರೋಧ ಪಕ್ಷಗಳ ಈ ಮನಸ್ಥಿತಿಯನ್ನು ಕ್ಷಮಿಸುವುದಿಲ್ಲ.‌ ಅಂಬೇಡ್ಕರ್ ಅವರು ಹಿಂದು ಕೋಡ್ ಬಿಲ್ ಮೂಲಕ ಮಹಿಳೆಯರ ಸಮಾನತೆಗಾಗಿ ಹೋರಾಡಿದ್ದರು. ಅಂದು ಅಂಬೇಡ್ಕರ್ ಆಶಯಗಳಿಗೆ ಅಡ್ಡಗಾಲು ಹಾಕಿದ್ದ ಕಾಂಗ್ರೆಸ್ ಇಂದು ಮೋದಿ ಸರ್ಕಾರದ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ಮೂಲಕ ಶಕ್ತಿ ತುಂಬುವ ಸಂಕಲ್ಪಕ್ಕೆ ಅಡ್ಡಗಾಲು ಹಾಕುವ ರಾಹುಲ್ ಗಾಂಧಿ ನೇತೃತ್ವದ ವಿರೋಧ ಪಕ್ಷದ ನಡೆ ಅತ್ಯಂತ ಅಮಾನವೀಯ ಮತ್ತು ಕೀಳು ಮನಸ್ಥಿತಿಯ ಪರಮಾವಧಿಯಾಗಿದೆ.

ನಾರಿ ಶಕ್ತಿ ವಂದನಾ ಕಾಯ್ದೆಗೆ ಸೋಲುಂಟಾಗಿರುವುದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಕರಾಳ ದಿನವಾಗಿದೆ ಎಂದೂ ಸುಲೋಚನಾ ಭಟ್ ಆತಂಕ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *