Breaking
20 Sep 2026, Sun

ಧಾರ್ಮಿಕ ಮುಖಂಡ ಧರ್ಣಪ್ಪ ಶೆಟ್ಟಿ ಪೂವಳ ಇನ್ನಿಲ್ಲ

ಬಂಟ್ವಾಳ : ಸಂಗಬೆಟ್ಟು ಸಮೀಪದ ಪೂವಳ ನಿವಾಸಿ, ಪ್ರಗತಿಪರ ಕೃಷಿಕ, ಹಿರಿಯ ಧಾರ್ಮಿಕ ಮುಖಂಡ ಧರ್ಣಪ್ಪ ಶೆಟ್ಟಿ ಪೂವಳ (88) ಇವರು ಅಸೌಖ್ಯದಿಂದ ಭಾನುವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.

ಮೃತರಿಗೆ ಪತ್ನಿ, ವಕೀಲ ಸುರೇಶ್ ಶೆಟ್ಟಿ ಸಹಿತ ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರು ಇದ್ದಾರೆ. ಪ್ರಗತಿಪರ ಕೃಷಿಕರಾಗಿ, ಯಕ್ಷಗಾನ ಪ್ರೋತ್ಸಾಹಕರಾಗಿ, ಕಳೆದ 10 ವರ್ಷಗಳ ಹಿಂದೆ ಪೂವಳ ಪರಿಸರದಲ್ಲಿ, ‘ ಶ್ರೀ ರಾಮಾಂಜನೇಯ ‘ ಕ್ಷೇತ್ರ ಸ್ಥಾಪಿಸಿ, ಸ್ವತಃ ಪೂಜೆ ನೆರವೇರಿಸುತ್ತಿದ್ದರು.ಮೃತರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ 3 ಗಂಟೆಗೆ ಪೂವಳ ಸ್ವಗೃಹ ಬಳಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *