11 Apr 2026, Sat

ಹಿರಿಯ ಪ್ರಗತಿಪರ ಕೃಷಿಕ ಐತಪ್ಪ ಗೌಡ ಗಂಪದಡ್ಡ ನಿಧನ

ಬಂಟ್ವಾಳ : ಪಂಜಿಕಲ್ಲು ಗ್ರಾಮದ ಗಂಪದಡ್ಡ ನಿವಾಸಿ, ಹಿರಿಯ ಪ್ರಗತಿಪರ ಕೃಷಿಕ ಐತಪ್ಪ ಗೌಡ ಗಂಪದಡ್ಡ (80) ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಏ.10 ರಂದು ನಿಧನರಾದರು.

ಹಿರಿಯ ಪ್ರಗತಿಪರ ಕೃಷಿಕರಾಗಿ, ಹೈನುಗಾರರಾಗಿ, ಏಲಕ್ಕಿ ಬೆಳೆ ಬಗ್ಗೆ ವಿಶೇಷ ಪರಿಣತಿ ಹೊಂದಿದ್ದ ಇವರು ವಿವಿಧ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದರು. ಕಳೆದ 10 ವರ್ಷಗಳಿಂದ ರಾಯಿ ಸಮೀಪದ ಕಾರಂಬಡೆ ಎಂಬಲ್ಲಿ ಅಡಿಕೆ ಕೃಷಿ ಮತ್ತು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು.

ಮೃತರ ಅಂತ್ಯಕ್ರಿಯೆ ಪಂಜಿಕಲ್ಲು ಗ್ರಾಮದ ಗಂಪದಡ್ಡ ಸ್ವಗೃಹ ಬಳಿ ಏ. 10 ರಂದು ಸಂಜೆ ನೆರವೇರಿತು. ಮೃತರು ಪತ್ನಿ, ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *