ಬಂಟ್ವಾಳ: ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಒಡ್ಡೂರು ಫಾರ್ಮ್ಸ್‌ನಲ್ಲಿ ವಿಶೇಷ ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಯವರು ಭಾಗವಹಿಸಿ ಯೋಗದ ಮಹತ್ವವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಯೋಗವು ಭಾರತದ ಪ್ರಾಚೀನ ಸಂಸ್ಕೃತಿಯ ಅಮೂಲ್ಯ ಪರಂಪರೆಯಾಗಿದ್ದು, ಆರೋಗ್ಯವಂತ ಹಾಗೂ ಸಮತೋಲನಯುತ ಜೀವನಕ್ಕೆ ಯೋಗವೇ ಅತ್ಯುತ್ತಮ ಮಾರ್ಗವಾಗಿದೆ” ಎಂದು ಹೇಳಿದರು.

ಪ್ರತಿದಿನ ಯೋಗವನ್ನು ಜೀವನದ ಭಾಗವನ್ನಾಗಿಸಿಕೊಳ್ಳುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಅವರು ಸಾರ್ವಜನಿಕರಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಭರತ್ ಜೈನ್, ಮಂಗಳೂರು ಬಿಜೆಪಿ ನಗರ ಉತ್ತರ ಮಂಡಲದ ಕಾರ್ಯದರ್ಶಿ ಸಚಿನ್ ಅಡಪ, ಯಶವಂತ ಕೋಟ್ಯಾನ್, ರೋಹಿತ್ ಶೆಟ್ಟಿ ಮಿಜಾರ್ ಹಾಗೂ ಗೀತೆಶ್ ಉಪಸ್ಥಿತರಿದ್ದರು.

ಯೋಗ ದಿನಾಚರಣೆಯ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಅನೇಕರು ಭಾಗವಹಿಸಿ ಯೋಗಾಭ್ಯಾಸದಲ್ಲಿ ತೊಡಗಿದರು.


