ಮೈಸೂರು: 2025 – 26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು,ಕೂರ್ಗಳ್ಳಿ ಗ್ರಾಮದ ನಿವಾಸಿ ಧನಂಜಯ ಮತ್ತು ಸುವರ್ಣ ಅವರ ದ್ವಿತೀಯ ಪುತ್ರ ತನ್ಮಯ್ ಎಂ ಡಿ ರವರು 600 ಕ್ಕೆ 533 ಅಂಕ ಪಡೆದಿದ್ದಾರೆ.

ತನ್ಮಯ್ ಎಂಡಿ ರವರಿಗೆ ಒಂದು ಹೆಜ್ಜೆ ರಕ್ತದಾನಿಗಳ ಬಳಗದ ಅಧ್ಯಕ್ಷರಾದ ರಕ್ತದಾನಿ ಮಂಜು ರವರು ಮತ್ತು ಕುಟುಂಬ ಸದಸ್ಯರು ಸೇರಿ ಅವರಿಗೆ ಗಿಡ ಕೊಡುವ ಮುಖಾಂತರ ಗೌರವಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮೋಹನ್ ಕುಮಾರ್, ವಿಶಾಲಮ್ಮ , ಸುವರ್ಣ ರಕ್ತದಾನಿ ಮಂಜು ಉಪಸ್ಥಿತರಿದ್ದರು.





