11 Apr 2026, Sat

ಏ. 21 ರಂದು ಹೊಕ್ಕಾಡಿಗೋಳಿಯಲ್ಲಿ ಕಚ್ಚೂರ ಮಾಲ್ದಿ ಯಕ್ಷಗಾನ ಬಯಲಾಟ

ಬಂಟ್ವಾಳ: ಶ್ರೀ ಮಹಿಷಮರ್ದಿನಿ ಯಕ್ಷಗಾನ ವೃಂದ ಪೂಂಜ ಇವರ ಆಶ್ರಯದಲ್ಲಿ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸುಂಕದಕಟ್ಟೆ ಇವರಿಂದ 5ನೇ ವರ್ಷದ ಕಚ್ಚೂರ  ಮಾಲ್ದಿ ಯಕ್ಷಗಾನ ಬಯಲಾಟವು ಹೊಕ್ಕಾಡಿಗೋಳಿ ಆರಂಬೋಡಿ ಗ್ರಾಮ ಪಂಚಾಯತ್ ಬಳಿ ಹಾಕಿರುವ ವಿದ್ಯುದೀಪಾಲಂಕೃತ ಭವ್ಯ ರಂಗಮಂಟಪದಲ್ಲಿ ಏ. 21 ರಂದು ನಡೆಯಲಿದೆ.

ಸಂಜೆ 6. 00 ಗಂಟೆಗೆ ಚೌಕಿಪೂಜೆ  ಹಾಗೂ ರಾತ್ರಿ 8 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಈ  ಯಕ್ಷಗಾನ ಬಯಲಾಟ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳಾದ ತಾವೆಲ್ಲರೂ ಆಗಮಿಸಿ, ಈ ಯಕ್ಷಗಾನ ಬಯಲಾಟವನ್ನು ಯಶಸ್ವಿಗೊಳಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *