ಬಂಟ್ವಾಳ : ತಾಲೂಕಿನ ಅಜಿಲ ಮೊಗೇರು ದೆಚ್ಚಾರ್ ಸದಾನಂದ ವನಿತ ದಂಪತಿಗಳ ಮಗಳಾದ ಶ್ರೀಜಾ ತನ್ನ ಅಜ್ಜಿ ಮನೆಯಾದ ನರಿಕೊಂಬು ಗ್ರಾಮದ ಅಬೆರೊಟ್ಟು ಗಂಗಯ್ಯ ಪೂಜಾರಿಯವರ ಮನೆಯಿಂದಲೇ ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಿದ್ದು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 594 ಅಂಕ ಪಡೆದು ರಾಜ್ಯಕ್ಕೆ ಆರನೇ ಸ್ಥಾನ ಪಡೆದಿದ್ದಾರೆ.

ಎಸ್ ಎಸ್ ಎಲ್ ಸಿ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಬೊಂಡಾಲದಲ್ಲಿ ಪಡೆದು 581 ಅಂಕ ಪಡೆದು ಇದೀಗ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಯಾವುದೇ ತರಹದ ಕೋಚಿಂಗ್ ಗಳನ್ನು ಪಡೆಯದೆ ತನ್ನ ಸ್ವಂತ ಕಲಿಕಾ ಸಾಮರ್ಥ್ಯದ ಮೂಲಕ 594 ಅಂಕ ಪಡೆದಿರುತ್ತಾರೆ.

ಈ ಸಾಧನೆಯನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ನೀಡಿದ ಶಿಕ್ಷಕ ವೃಂದ, ಸಂಬಂಧಿಕರು, ಹಿತೈಷಿಗಳು, ನರಿಕೊಂಬು ಗ್ರಾಮಸ್ಥರು, ಬಿರ್ವೆರ್ ಸೇವಾ ಟ್ರಸ್ಟ್ ನರಿಕೊಂಬು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.








