Breaking
21 Jun 2026, Sun

ಭರತನಾಟ್ಯ ಗುರು ವಿದ್ವಾನ್ ಶ್ರಾವಣ್ ಉಳ್ಳಾಲ್ ನಿಧನ

ಉಳ್ಳಾಲ: ಅಲ್ಪಕಾಲದ ಅನಾರೋಗ್ಯದಿಂದ ಭರತನಾಟ್ಯ ಗುರು ವಿದ್ವಾನ್ ಶ್ರಾವಣ್ ಉಳ್ಳಾಲ್ ನಿಧನರಾಗಿದ್ದಾರೆ.

ಉಳ್ಳಾಲ ಬಂಡಿಕೊಟ್ಯ ನಿವಾಸಿಯಾದ ಉಳ್ಳಾಲದ ಮಂತ್ರ ನಾಟ್ಯ ಕಲಾ ಗುರುಕುಲದ ನಿರ್ದೇಶಕರಾಗಿದ್ದರು. ಹಾಗೂ ದೂರದರ್ಶನ ಗ್ರೇಡೆಡ್ ಕಲಾವಿದರಾಗಿದ್ದರು.

ಅವರು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ವೀಣಾ ವಾದನದಲ್ಲೂ ಪರಿಣತಿ ಹೊಂದಿದ್ದರು.

ಅನೇಕ ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲೆಯನ್ನು ಬೋಧಿಸಿದ್ದ ಅವರು ಒಡಿಶಾ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಸಾಂಸ್ಕೃತಿಕ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾರೆ.

ನಾಟ್ಯ ಪ್ರವೀಣ ಪ್ರಶಸ್ತಿ, ಜನಪದ ಬಂಧು ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಅವರಿಗೆ ಸಂದಿವೆ.

Leave a Reply

Your email address will not be published. Required fields are marked *