Breaking
21 Jun 2026, Sun

ಚಲಿಸುತ್ತಿದ್ದ ರಿಕ್ಷಾಕ್ಕೆ ಬೆಂಕಿ: ಪ್ರಯಾಣಿಕರು ಅಪಾಯದಿಂದ ಪಾರು

ಬಂಟ್ವಾಳ: ಚಲಿಸುತ್ತಿದ್ದ ರಿಕ್ಷಾಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ರಿಕ್ಷಾ ಸುಟ್ಟು ಭಸ್ಮವಾದ ಘಟನೆ ಧರ್ಮಸ್ಥಳ ರಸ್ತೆಯ ಮೂರ್ಜೆ ವಿಶಾಲನಗರದಲ್ಲಿ ನಡೆದಿದೆ.

ಬಾಂಬಿಲ ನಿವಾಸಿ ರೇವಣ್ಣ ಅವರ ಗ್ಯಾಸ್‌ ಸಂಪರ್ಕ ಹೊಂದಿದ ರಿಕ್ಷಾವಾಗಿದ್ದು, ಗ್ಯಾಸ್‌ ಖಾಲಿಯಾಗಿರುವ ಕಾರಣ ಪೆಟ್ರೋಲ್‌ ತುಂಬಿಸಲು ತೆರಳುವ ವೇಳೆ ರಿಕ್ಷಾದಲ್ಲಿ ಗ್ಯಾಸ್ ಸೋರಿಕೆಯ ವಾಸನೆ ಬರುತ್ತಿದೆ ಎಂದು ಗಮನಿಸಿದ ಚಾಲಕ ರೇವಣ್ಣ ಅವರು ರಿಕ್ಷಾವನ್ನು ನಿಲ್ಲಿಸುತ್ತಿದ್ದಂತೆಯೇ ಕ್ಷಣಾರ್ಧದಲ್ಲೇ ರಿಕ್ಷಾ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.

ರಿಕ್ಷಾದಲ್ಲಿ ಪ್ರಯಾಣಿಕರಿದ್ದರೂ ಅವರಿಗೆ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *