ಬಂಟ್ವಾಳ: ಉತ್ತಮ ಉದ್ದೇಶದ ಸಂಘಟನೆಯು ಇನ್ನಷ್ಟು ವಿಸ್ತರಿಸುವ ಮೂಲಕ ಹೊಸ ಬದಲಾವಣೆ ತರಲು ಸಾಧ್ಯ. ಉನ್ನತ ಶಿಕ್ಷಣ, ಪ್ರತಿಭೆ ಪ್ರೋತ್ಸಾಹ ನೀಡುವುದರಿಂದ ಉದ್ಯೋಗ, ಉದ್ಯಮ ಇನ್ನಷ್ಟು ಬೆಳೆಯುತ್ತದೆ ಎಂದು ಕರಿಂಜೆ ಶ್ರೀ ಲಕ್ಷ್ಮೀ ಸತ್ಯನಾರಾಯಣ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದ್ದಾರೆ.
ಅವರು ಬಂಟ್ವಾಳ ತಾಲೂಕಿನ ಕಂದೂರಿನ ಮಡಿವಾಳ ಮಾಚಿದೇವ ಸಭಾಭವನದಲ್ಲಿ ನಡೆದ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘದ 33 ನೇ ವಾರ್ಷಿಕ ಮಹೋತ್ಸವದಲ್ಲಿ ಆಶೀರ್ವಚನ ನೀಡಿದರು.
ತಾಲೂಕು ಸಂಘದ ಅಧ್ಯಕ್ಷ ಹರೀಶ್ ಮಂಕುಡೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಂಘದ ಅಧ್ಯಕ್ಷ ಬಿ.ಎನ್. ಪ್ರಕಾಶ್, ಪುತ್ತೂರಿನ ವೀರ ಮಾಚಿದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಇಂದುಶೇಖರ್ ಪಿ.ಬಿ., ಮಂಗಳೂರು ಆಕೃತಿ ಆಶಯ ಪಬ್ಲಿಕೇಷನ್ ನ ಪ್ರಕಾಶಕ ಕಲ್ಲೂರು ನಾಗೇಶ್, ತಾಲೂಕು ಸಂಘದ ಗೌರವಾಧ್ಯಕ್ಷ ಎನ್. ಕೆ. ಶಿವ, ಮಡಿವಾಳ ಯುವ ಬಳಗ ಅಧ್ಯಕ್ಷ ಸಂದೇಶ್ ಕೊಯಿಲ, ಮಹಿಳಾ ಬಳಗ ಅಧ್ಯಕ್ಷೆ ಶೋಭಾ ಪಂಜಿಕಲ್ಲು ಇದ್ದರು.
ಈ ಸಂದರ್ಭದಲ್ಲಿ ಯೋಗೀಶ್ ಕಳಸಡ್ಕ, ವಿಶ್ವನಾಥ ಮಡಿವಾಳ ಅನಂತಾಡಿ, ಭಾಗೀರಥಿ ಕೆದಿಲ, ಪದ್ಮನಾಭ ಗುಜರನ್ ಸಿದ್ಧಕಟ್ಟೆ , ವಸಂತಿ ಪ್ರಕಾಶ್ ಕಿದೆಬೆಟ್ಟು, ಲಕ್ಷ್ಮಣ ಬಂಗೇರ ಶರವು, ಪದ್ಮನಾಭ ಕಿದೆಬೆಟ್ಟು ಇವರನ್ನು ಸನ್ಮಾನಿಸಲಾಯಿತು.
ಸ್ಪರ್ಶಾ ಕೆಳಗಿನ ಪಂಜಿಕಲ್ಲು ಹಾಗೂ ರಕ್ಷಾ ವಕ್ಷಿತ್ ಪ್ರಾರ್ಥಿಸಿದರು. ಪುಷ್ಪರಾಜ್ ಕುಕ್ಕಾಜೆ ಸ್ವಾಗತಿಸಿ, ಮಹಿಳಾ ಬಳಗದ ಅಧ್ಯಕ್ಷೆ ಶೋಭಾ ಪಂಜಿಕಲ್ಲು ವಂದಿಸಿದರು. ವೆಂಕಟೇಶ ಮಾಸ್ತರ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.