Breaking
23 Dec 2024, Mon

ಯುವವಾಹಿನಿ ಬಂಟ್ವಾಳ ವತಿಯಿಂದ ಯಶಸ್ವಿ25 ನೇ ಗುರುತತ್ವವಾಹಿನಿ ಮಾಲಿಕೆ

ಅನುಷ್ಠಾನ ಪೂಜೆಯೇ ನಾರಾಯಣಗುರುಗಳ ಇಷ್ಟ ಪೂಜೆ : ಡಾ.ಯೋಗೀಶ್ ಕೈರೋಡಿ

ಬಂಟ್ವಾಳ : ದೇವರಿಗೆ ನಮ್ಮ ನಂಬಿಕೆಯ ಬಹುಬಗೆಯ ಪೂಜೆಯ ಪರಿಕಲ್ಪನೆಯಿದೆ. ಗುರುಗಳ ತತ್ವ ಅನುಷ್ಠಾನ ಪೂಜೆಯೇ ಅವರ ಇಷ್ಟ ಪೂಜೆ, ನಾರಾಯಣ ಗುರುಗಳ ಸಂದೇಶಗಳು ಕೇವಲ ಘೋಷಣೆಯ ಸಾಲುಗಳಲ್ಲ. ಅದು ನಮ್ಮ ಅಂತರಂಗದ ಭಾವವಾಗಬೇಕು. ಅಧ್ಯಯನ, ಆತ್ಮಾವಲೋಕನ ಮತ್ತು ಸುತ್ತಲಿನ ಜನಜೀವನವನ್ನು ವಿವೇಚಿಸಿದಾಗ ನಾರಾಯಣಗುರು ನಮ್ಮ ಅರಿವಿಗೆ ಬರುತ್ತಾರೆ ಎಂದು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕರಾದ ಡಾ.ಯೋಗೀಶ್ ಕೈರೋಡಿ ತಿಳಿಸಿದರು

ಅವರು ಸೋಮವಾರ ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ಹಾಗೂ ಸುರೇಶ್ ಸುವರ್ಣ ಇವರ ಸುವರ್ಣಕೇದಗೆ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 25ರ ಗುರುಸಂದೇಶ ನೀಡಿದರು.

ಸಂಸ್ಕೃತಿ ಮತ್ತು ಸಂಸ್ಕಾರಗಳ ಅಡಿಪಾಯದಲ್ಲಿ ನಮ್ಮ ಜೀವನ ಸಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಸಂಸ್ಕೃತಿ ಮತ್ತು ಸಂಸ್ಕಾರಗಳೊಂದಿಗೆ ಸಂಪ್ರದಾಯಗಳ ಬಗ್ಗೆ
ಗುರುತತ್ವವಾಹಿನಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ, ಈ ನಿಟ್ಟಿನಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಕಾರ್ಯ ಶ್ಲಾಘನೀಯ ಎಂದು ಗುರುತತ್ವವಾಹಿನಿ ಕಾರ್ಯಕ್ರಮಕ್ಕೆ ದ್ವನಿವರ್ದಕವನ್ನು ಕೊಡುಗೆಯಾಗಿ ನೀಡಿದ
2025ನೇ ಸಾಲಿನ ಕೋಟಿ ಚೆನ್ನಯ ಕ್ರೀಡೋತ್ಸವದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಪೂಜಾರಿ ಮೆಲ್ಕಾರ್ ತಿಳಿಸಿದರು.

ಅತಿಥಿ ಡಾ ಯೋಗೀಶ್ ಕೈರೋಡಿ ಹಾಗೂ ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಇವರನ್ನು ಸುವರ್ಣಕೇದಗೆ ಕುಟುಂಬಿಕರ ವತಿಯಿಂದ ಗೌರವಿಸಲಾಯಿತು

ಈ ಸಂದರ್ಭದಲ್ಲಿ ಸಂಗೀತ ವಾದಕರಾದ ರಾಜೇಶ್ ಅಮ್ಟೂರು, ಯುವವಾಹಿನಿ ಬಂಟ್ವಾಳ ಘಟಕದ ಪ್ರಥಮ ಉಪಾಧ್ಯಕ್ಷರಾದ ನಾರಾಯಣ ಪಲ್ಲಿಕಂಡ, ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಮಧುಸೂಧನ್ ಮಧ್ವ,ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕರ್ಕೇರ, ನಾಗೇಶ್ ಪೊನ್ನೊಡಿ, ಶಿವಾನಂದ ಎಂ, ಅರುಣ್ ಬಿ.ಸಿರೋಡ್ , ರಾಜೇಶ್ ಸುವರ್ಣ,ಸದಸ್ಯರಾದ, ಜಗನ್ನಾಥ್ ಸುವರ್ಣ ಕಲ್ಲಡ್ಕ,ಶೈಲೇಶ್ ಕುಚ್ಚಿಗುಡ್ಡೆ, ಅರ್ಜುನ್ ಅರಳ, ಸುನಿತಾ ನಿತಿನ್ ಮಾರ್ನಬೈಲ್,ಸುಲತಾ ಬಿ.ಸಿರೋಡ್, ಯಶೋಧರ ಕಡಂಬಳಿಕೆ,ರಚನಾ ಕರ್ಕೇರ, ಸುರೇಶ್ ಸುವರ್ಣ, ಮಲ್ಲಿಕಾ ಸುರೇಶ್ ಕರ್ಪೆ, ಪ್ರಶಾಂತ್ ಏರಮಲೆ, ಯೋಗೀಶ್ ಕರ್ಪೆ, ರತ್ನಾಕರ್ ಸಿದ್ಧಕಟ್ಟೆ, ಸುದೀಪ್ ಸಾಲ್ಯಾನ್ ರಾಯಿ,ನಿಕೇಶ್ ಕೊಟ್ಯಾನ್,ಮತ್ತಿತರರು ಉಪಸ್ಥಿತರಿದ್ದರು.

ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *