ವಿಟ್ಲ: ವಿಟ್ಲ ಪಟ್ಟಣ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ರವಿಪ್ರಕಾಶ್ ಅವರ ಪದಗ್ರಹಣ ಸೋಮವಾರ ನಡೆಯಿತು.
ಬಿಜೆಪಿಯ ಹಿರಿಯ ಮುಖಂಡ ನಿತ್ಯಾನಂದ ನಾಯಕ್ ಸ್ಥಾಯಿ ಸಮಿತಿ ಅಧ್ಯಕ್ಷರ ಕೊಠಡಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ. ಸ್ಥಾಯಿ ಸಮಿತಿಯ ಅಧ್ಯಕ್ಷತೆ ನಿಮ್ಮ ಅಭಿವೃದ್ಧಿ ಕೆಲಸ ನಿರ್ವಹಣೆಗೆ ಇನ್ನಷ್ಟು ಹುರುಪು ತುಂಬಲಿ ಎಂದರು.
ಪಟ್ಟಣ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್ ಮಾತನಾಡಿ ಪಟ್ಟಣ ಪಂಚಾಯತಿ ಅಧ್ಯಕ್ಷರ ಉಪಾಧ್ಯಕ್ಷರ ಸದಸ್ಯರ ಸಿಬ್ಬಂದಿಗಳ ಸಹಕಾರದಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಣೆ ಮಾಡುತ್ತೇನೆ. ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ ಎಂದರು.
ಪಟ್ಟಣ ಪಂಚಾಯತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಬಿಜೆಪಿ ಮುಖಂಡರ ಉದಯ ಆಲಂಗಾರು, ದಯಾನಂದ ಉಜಿರೆಮಾರು, ಸಾಜ ರಾಧಾಕೃಷ್ಣ ಆಳ್ವ, ಮೋಹನ ದಾಸ ಉಕ್ಕುಡ, ಜಗನ್ನಾಥ ಕಾಸರಗೋಡು ಮಾತನಾಡಿದರು.ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಕರುಣಾಕರ್, ಸದಸ್ಯರಾದ ಅರುಣ್ ವಿಟ್ಲ, ಜಯಂತ, ವಸಂತ್, ಹರೀಶ್, ಬಿಜಪಿ ಮುಖಂಡರಾದ ರಾಮದಾಸ ಶೆಣೈ, ಗೋಕುಲದಾಸ ಶೆಣೈ ಸಹಿತ ಹಲವರು ಉಪಸ್ಥಿತರಿದ್ದರು.