ಮೈಸೂರು: ಯಶೋಧ ಸೇವಾ ಟ್ರಸ್ಟ್ ಐದನೇ ವರ್ಷದ ವಾರ್ಷಿಕೋತ್ಸವ ಸಂಭ್ರಮಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಅಂಗವಾಗಿ ದಿನಾಂಕ 30/11/2024ರಂದು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ವನ್ನ ಹಮ್ಮಿಕೊಂಡಿತ್ತು.
ಅ ಪ್ರಯುಕ್ತ ರಕ್ತದಾನಿ ಮಂಜುರವರಿಗೆ “ಕರ್ನಾಟಕ ಸೇವಾ ರತ್ನ ಪ್ರಶಸ್ತಿ” ಯನ್ನು ನೀಡಿ ಗೌರವಿಸಲಾಯಿತು.
ಪ್ರತಿದಿನ ಪ್ರತಿನಿತ್ಯ ರಕ್ತದ ಸೇವೆಯಲ್ಲಿ ತೊಡಗಿರುವ ರಕ್ತದಾನಿ ಮಂಜು ರವರು ಸತತವಾಗಿ ನಾಲ್ಕು ವರ್ಷಗಳಿಂದ ರಕ್ತದಾನ ಮಾಡುತ್ತಾ ಮಾಡಿಸುತ್ತಾ ಬಂದಿರುತ್ತಾರೆ ಜೊತೆಗೆ ಅವರು ಸಮಾಜ ಸೇವೆಯಲ್ಲಿ ಸೇವೆಯನ್ನು ಸಲ್ಲಿಸುತ್ತಾ “ರಕ್ತದಾನಿ ಮಂಜು” ಎಂದು ಹೆಸರುವಾಸಿಯಾಗಿದ್ದಾರೆ ಇವರನ್ನು ಯಶೋಧ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಯಶೋಧ ರಾಜ್ ರವರು ಗುರುತಿಸಿ “ಕರ್ನಾಟಕ ಸೇವಾ ರತ್ನ ಪ್ರಶಸ್ತಿ” ಯನ್ನು ನೀಡಿ ಗೌರವಿಸಿದರು.