Breaking
23 Dec 2024, Mon

ಜೇಸಿ ಕಲರವ-2024: ಅದ್ದೂರಿಯಾಗಿ ನಡೆದ ಶಾಲಾ ವಾರ್ಷಿಕೋತ್ಸವ

ವಿಟ್ಲ: ವಿಟ್ಲ ಬಸವನಗುಡಿಯಲ್ಲಿರುವ ವಿಠಲ್ ಜೇಸಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 2024 ರ ಶಾಲಾ ವಾರ್ಷಿಕೋತ್ಸವ ಜೇಸಿ ಕಲರವ-2024 ಜರಗಿತು. ಸುಮಾರು 1091 ವಿದ್ಯಾರ್ಥಿಗಳ ವಿಭಿನ್ನ ಪ್ರತಿಭಾ ಪ್ರದರ್ಶನ 46 ಕಾರ್ಯಕ್ರಮಗಳ ಮೂಲಕ ಒಂದೇ ವೇದಿಕೆಯಲ್ಲಿ ಮೂಡಿಸುವ ಪ್ರಯತ್ನ ಸಾಪಲ್ಯ ಕಂಡಿತು.

ಸಮಯದ ಆದ್ಯತೆಯೊಳಗೆ ಕಾರ್ಯಕ್ರಮವು ಬೆಳಗ್ಗೆ 9:30 ರಿಂದ ನಿರಂತರವಾಗಿ 7.00 ಗಂಟೆಯವರೆಗೆ ನಡೆಯಿತು .ಕ್ರಮವಾಗಿ ದೀಪ ಪ್ರಜ್ವಲನೆ, ಪ್ರಾರ್ಥನೆ, ಸ್ವಾಗತ ನೃತ್ಯದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಗುತ್ತಾ, ವಿದ್ಯಾರ್ಥಿಗಳಿಂದ ಶಿಶುಗೀತೆ, ಪೌರಾಣಿಕ ರೂಪಕ, ನಾಟಕ, ಯಕ್ಷಗಾನ,ಕರಾಟೆ, ಬಹುಮುಖ ಪ್ರತಿಭೆಗಳಿಂದ ಒಂದೇ ವೇದಿಕೆಯಲ್ಲಿ ಬಹು ವಿಧದ ಸಂಗೀತ ಉಪಕರಣಗಳ ಸಂಯೋಜನೆ ಬೆರಗಾಗಿಸಿತು. ದೇಶ ಕಾಯುವ ಯೋಧರು, ಆಹಾರ ನೀಡುತ್ತಾ ದೇಶ ಸೇವೆಗೈಯುವ ಸೇವಕರಿಗೆ ನಮಿಸುತ್ತಾ, ರಾಷ್ಟೀಯ ಭಾವೈಕ್ಯತೆಯ ವಿಭಿನ್ನ ಕಾರ್ಯಕ್ರಮದೊಂದಿಗೆ ಸಮಾಪನಗೊಂಡಿತು.

ವಿದ್ಯಾರ್ಥಿಗಳಿಂದಲೇ ನಡೆಸಲ್ಪಡುವ ಸಭಾಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಭವಿಷ್ಯದ ಬುನಾದಿಯಾಗುತ್ತದೆ. ಈ ಕರ್ತವ್ಯ ವಿದ್ಯಾಸಂಸ್ಥೆಗಳು ಮಾಡುತ್ತವೆ. ಅಂಕಗಳು ಮಾತ್ರ ಮುಖ್ಯವಲ್ಲ ಜೀವನ ಕೌಶಲ್ಯದ ದಾರಿ ತೋರುವ ಕಾರ್ಯ ಶಾಲೆಗಳಲ್ಲಿ ನಡೆಯಲಿ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಲಾ ಹಳೆ ವಿದ್ಯಾರ್ಥಿ ಮಣಿಪಾಲ ತಾಂತ್ರಿಕ ಸಂಸ್ಥೆಯ ಸಂಶೋಧನ ವಿಭಾಗದ ಸಂಶೋಧಕ ಶ್ರೀನಿಧಿ ಕುಕ್ಕಿಲ ಶುಭ ಹಾರೈಸಿದರು.

ಕಾರ್ಕಳ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ನಾಯಕ ಅಲೋಕ್. ಸಿ. ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು. ಜೇಸಿ ಶಾಲಾ ವಿದ್ಯಾರ್ಥಿ ನಾಯಕ ಜ್ಞಾನೇಶ್ ಯನ್.ಡಿ ಸಭಾಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ 2022 – 23 ನೇ ಸಾಲಿನ ಹತ್ತನೇ ತರಗತಿಯಲ್ಲಿ 90+ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಆಟೋಟ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು, ರಾಜ್ಯ ಪುರಸ್ಕಾರ ಪಡೆದ ಗೈಡ್ಸ್ ವಿದ್ಯಾರ್ಥಿಗಳಿಗೆ, ಹಾಗೂ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಾಲಾ ವಾರ್ಷಿಕ ಪತ್ರಿಕೆ “ವಿಷನ್” ಬಿಡುಗಡೆ ಗೊಳಿಸಲಾಯಿತು.ಶಾಲಾ ಅಧ್ಯಕ್ಷರಾಗಿದ್ದು, ಇತ್ತೀಚೆಗೆ ಅಗಲಿದ ದಿವಂಗತ ಎಲ್‌.ಎನ್.ಕೂಡೂರು ಅವರ ಭಾವಚಿತ್ರ ಅನಾವರಣ, ನೋಂದಾಯಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ (RUPSA)ಕೊಡ ಮಾಡಿದ ಮರಣೋತ್ತರದ “ಶಿಕ್ಷಣ ಭೀಷ್ಮ ಪ್ರಶಸ್ತಿ”ಯ ಮಾಹಿತಿಯೊಂದಿಗೆ “ನುಡಿ ನಮನ” ಸಲ್ಲಿಸಲಾಯಿತು.

ಸಭಾಕಾರ್ಯಕ್ರಮದಲ್ಲಿ ಮಹಿಮ ಆರ್. ಕೆ ಸ್ವಾಗತಿಸಿದರು. ಪ್ರಾಂಶುಪಾಲ ಜಯರಾಮ ರೈ ವರದಿ ವಾಚಿಸಿದರು.ವಿದ್ಯಾರ್ಥಿಗಳಾದ ಖತಿಜತ್ ಆಮಿಷ, ಜಿತಿನ್, ಅಭಿರಾಮ್, ಭವಿಷ್, ರಿಧಾ ಬೇಗಂ, ಅಶ್ವಿನಿ ಬಹುಮಾನದ ಪಟ್ಟಿ ವಾಚಿಸಿದರು. ನಿಧಿಕ್ಷಾ ವಂದಿಸಿದರು. ಯಾಶಿಕ ನಿರೂಪಿಸಿದರು.ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ಎಲ್ಲಾ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಕರಾಗಿ ಮನಸ್ವಿನಿ ,ಆತ್ಮಿ ,ಸನೂಫ, ಸ್ವಸ್ತಿ ನೆರವೇರಿಸಿ ಕೊಟ್ಟರು. ಕುಮಾರಿ ಧಾತ್ರಿ ಧನ್ಯವಾದ ನೆರವೇರಿಸಿದಳು. ಶಾಲಾ ಪ್ರಾಂಶುಪಾಲರು,ಉಪ ಪ್ರಾಂಶುಪಾಲರು, ಆಡಳಿತ ಅಧಿಕಾರಿ, ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. ಶ್ರೀಮತಿ ತುಳಸಿ, ಸೌಮ್ಯಸಾವಿತ್ರಿ, ರೇಖಾ, ಅಪರ್ಣ ಇವರು ಕಾರ್ಯಕ್ರಮವನ್ನು ಆಯೋಜಿಸಲು ಸಹಕರಿಸಿದರು.

Leave a Reply

Your email address will not be published. Required fields are marked *