ಸಿದ್ದಕಟ್ಟೆ‘ ಕುಡಾಲ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜ ಸಿದ್ದಕಟ್ಟೆ ಕರ್ಪೆ ಮುಗೇರು ವತಿಯಿಂದ ಆಶ್ರಮವೊಂದಕ್ಕೆ ದಾನ ನೀಡುವ ಉದ್ದೇಶದಿಂದ ಸುಮಾರು 46 ಮನೆಗಳಿಂದ ಸೀರೆ, ನೈಟಿ,ಚೂಡಿದಾರ,ಲೇಡೀಸ್ ಪ್ಯಾಂಟ್ ಜೆಂಟ್ಸ್ ಪ್ಯಾಂಟ್,ಜೆಂಟ್ಸ್ ಶರ್ಟ್-ಟಿ ಶರ್ಟ್ ಮುಂಡು, ವೇಸ್ಟಿ ಭೈರಸ್, ಬೆಡ್ ಶೀಟ್ ಸೇರಿ ಸುಮಾರು 300ಕೆಜಿ ಬಟ್ಟೆಗಳನ್ನ ಸಂಗ್ರಹಿಸಲಾಯಿತು.
ಸಂಗ್ರಹವಾದ ಬಟ್ಟೆಗಳನ್ನು ಪ್ರಜ್ವಲ್ ನಾಯಕ್ ನೇತೃತ್ವದಲ್ಲಿ ಕರ್ಪೆಯ ಮಹಾಗಣಪತಿ ಸೇವಾ ವೃಂದ ಇವರ ಸಹಕಾರದೊಂದಿಗೆ ಹೊಸಬೆಳಕು ಆಶ್ರಮಕ್ಕೆ ನೀಡಲಾಯಿತು.