ಮುಂಬೈ: ಶಿವ್ ಸಾಗರ್ ಫುಡ್ಸ್ ಪ್ರೈ. ಲಿ ಇದರ ಆಡಳಿತ ನಿರ್ದೇಶಕರು ಹಾಗೂ ಸಮಾಜ ಸೇವಕರಾದ ಎನ್. ಟಿ. ಪೂಜಾರಿ ಸಂಚಾಲಕತ್ವದ “ದ. ಬಿಗ್ -ಸ್ಮಾಲ್ ಕೆಫೆ ಬಾರ್ ” ದಾದರ್ ಪಶ್ಚಿಮದ ಇಂಡಿಯಾ ಬುಲ್ಸ್ ಫೈನಾನ್ಸಿಯಲ್ ಸೆಂಟರ್ ಇಲ್ಲಿ ಇಂದು ಲೋಕಾರ್ಪಣೆಗೊಂಡಿತು.
ಶ್ರೀ ಸತ್ಯನಾರಾಯಣ ಮಹಾಪೂಜೆಯೊಂದಿಗೆ ಸಂಸ್ಥೆಯು ಲೋಕಾರ್ಪಣೆಗೊಂಡಿತು. ಈ ಸಂಧರ್ಭದಲ್ಲಿ “ನಮನ ಫ್ರೆಂಡ್ಸ್ ಮುಂಬಯಿ” ಸಂಸ್ಥಾಪಕ ಪ್ರಭಾಕರ ಬೆಳುವಾಯಿ, ಕರ್ನಾಟಕ ಮಲ್ಲ ದೈನಿಕದ ಸಂಪಾದಕರಾದ ಚಂದ್ರಶೇಖರ ಪಾಲೆತ್ತಾಡಿ, ಬಿಲ್ಲವರ ಅಸೋಸಿಯೇಷನ್ ಉಪಾಧ್ಯಕ್ಷರಾದ ಪುರುಷೋತ್ತಮ್ ಕೋಟ್ಯಾನ್, ಉದ್ಯಮಿ ಸಮಾಜ ಸೇವಕ ಗಂಗಾಧರ್ ಅಮೀನ್ ಕರ್ನಿರೆ, ಸೇರಿದಂತೆ ದಿವಾಕರ್ ಇರ್ವತ್ತೂರು, ದಿವಾಕರ ಪೂಜಾರಿ ಕಾಂತಾವರ ಇವರೆಲ್ಲರೂ ಉಪಸ್ಥಿತರಿದ್ದು ಎನ್ . ಟಿ. ಪೂಜಾರಿಯವರ ನೂತನ ಉದ್ಯಮಕ್ಕೆ ಶುಭಹಾರೈಸಿದರು.