Breaking
20 Sep 2026, Sun

ಎಂಆರ್ ಪಿಎಲ್ ನ ಟ್ಯಾಂಕ್ ಪ್ಲಾಟ್ ಫಾರ್ಮ್ ನಲ್ಲಿ ಅನಿಲ ಸೋರಿಕೆ: ಇಬ್ಬರು ಸಾವು,ಓರ್ವ ಗಂಭೀರ

ಮಂಗಳೂರು: ಹೊರವಲಯದ ಸುರತ್ಕಲ್ ನ ಎಂಆರ್ ಪಿಎಲ್ ನ ಟ್ಯಾಂಕ್ ಪ್ಲಾಟ್ ಫಾರ್ಮ್ ನಲ್ಲಿ ಅನಿಲ ಸೋರಿಕೆಯಾದ ಘಟನೆ ಜು.12 ರಂದು ನಡೆದಿದೆ.

ಪರಿಣಾಮ ಹಿರಿಯ ನಿರ್ವಾಹಕರಿಬ್ಬರು ಸಾವನ್ನಪ್ಪಿ, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಎಂಆರ್ ಪಿಎಲ್ ನ ನಿರ್ವಾಹಕರಾಗಿದ್ದ ಪ್ರಯಾಗ್ ರಾಜ್ ನ ದೀಪ್ ಚಂದ್ರ (33) ಮತ್ತು ಕೇರಳದ ಬಿಜಿಲ ಪ್ರಸಾದ್ (33) ಎಂದು ಗುರುತಿಸಲಾಗಿದೆ.

ಇನ್ನು ರಕ್ಷಣೆಗೆ ಹೋದ ಗದಗ ಮೂಲದ ವಿನಾಯಕ್ ಎಂಬವರು ಗಾಯಗೊಂಡಿದ್ದು ಚಿಕಿತ್ಸೆ ಪಡೆದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಘಟಕದಲ್ಲಿ ಸಣ್ಣ ಪ್ರಮಾಣದ ಎಚ್2ಎಸ್ ಅನಿಲ ಸೋರಿಕೆ ಕಂಡುಬಂದಿದ್ದು ಕಾರ್ಮಿಕರು ಮಾಸ್ಕ್ ಧರಿಸಿ ಪರಿಶೀಲಿಸುವಾಗ ಅನಿಲವನ್ನು ಉಸಿರಾಡಿದಾಗ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಎಂಆರ್ ಪಿಎಲ್ ಅಗ್ನಿಶಾಮಕ ಮತ್ತು ಸುರಕ್ಷತಾ ತಂಡ ಸೋರಿಕೆಯನ್ನು ಸರಿಪಡಿಸಿತ್ತು ಅನ್ನುವ ಮಾಹಿತಿ ಇದೆ.

ಇನ್ನು ಘಟನೆಯಲ್ಲಿ ಸಾವನ್ನಪ್ಪಿದ್ದ ಕುಟುಂಬ ಸಂಬಂಧಿಕರ ಹೇಳಿಕೆಯ ಆಧಾರದ ಮೇಲೆ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *