Breaking
20 Sep 2026, Sun

ಅಮ್ಟೂರು: ಅಶ್ವತ್ಥಕಟ್ಟೆ ಪುನರ್ ನಿರ್ಮಾಣಕ್ಕೆ ಶಿಲಾನ್ಯಾಸ

ಬಂಟ್ವಾಳ : ಅಮ್ಟೂರ್ ಹೃದಯಾ ಭಾಗದಲ್ಲಿರುವ ಅಶ್ವತ್ಥ ಕಟ್ಟೆಯನ್ನು ವಾಸ್ತು ಪ್ರಕಾರ ಆಯವತ್ತವಾಗಿ ಪುನರ್ ನಿರ್ಮಾಣ ಮಾಡಲು ಶಿಲಾನ್ಯಾಸ ನೆರವೇರಿಸಲಾಗಿದೆ ಸಜೀಪ ಮಾಗಣೆಯ ತಂತ್ರಿಗಳಾದ ಎಂ.ಸುಬ್ರಹ್ಮಣ್ಯ ಭಟ್ ಧಾರ್ಮಿಕ ವಿಧಿ ವಿಧಾನದ ಮೂಲಕ ಶಿಲಾನ್ಯಾಸ ನೆರವೇರಿಸಿದರು‌.

ನೆಟ್ಲ ಶ್ರೀ ನಿಟಿಲಾಕ್ಷ ಸದಾಶಿವ ದೇವರ ಲಕ್ಷದೀಪೋತ್ಸವದ ಸಂದರ್ಭದಲ್ಲಿ ದೇವರ ಉತ್ಸವ ಮೂರ್ತಿಗೆ ಇದೇ ಅಶ್ವತ್ಥ ಕಟ್ಟೆಯಲ್ಲಿ ಪೂಜೆ ನಡೆಯುತ್ತಿತ್ತು.

ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮೋಹನ ರಾಜ ಚೌಟ ಪುಂಜಲ್ ಮಾರ್ ಗುತ್ತು, ಬಂಟ್ವಾಳ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು, ರತ್ನಾಕರ ಪಡೀಲ್, ಸಂಜೀವ ಪೂಜಾರಿ ಅಮ್ಟೂರು, ಕೃಷ್ಣಪ್ಪ ಕುಬಾಲ್, ಶರತ್ ಕುಮಾರ್, ವೇಣುಗೋಪಾಲ , ಹರೀಶ, ಅನಿಲ್, ಸುಂದರ ಶಾಂತಿ ಪಾಲಿಕೆ, ಕೃಷ್ಣಪ್ಪ ಆಚಾರ್ಯ, ಮೋನಪ್ಪ ಆಚಾರ್ಯ, ಕುoಜ್ಞ ಪೂಜಾರಿ ಯಾನೆ ದಯಾನಂದ ಪೂಜಾರಿ, ಧನಂಜಯ ರೈ , ಮಹಾಬಲ ಸಾಲಿಯಾನ್ ಮುಳಿ ಕೊಡಂಗೇ ಇನ್ನೂ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *