ಬಂಟ್ವಾಳ: ಜೆಸಿಐ ಬಂಟ್ವಾಳದ 2025ನೇ ಸಾಲಿನ ಅಧ್ಯಕ್ಷರಾಗಿ ಗಣೇಶ್ ಕುಲಾಲ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಘಟಕದ ಅಧ್ಯಕ್ಷೆ ರಶ್ಮಿ ಶೆಟ್ಟಿ ಅಧ್ಯಕ್ಷತೆಯಲ್ಲಿ, ನಿಟಕಪೂರ್ವಾಧ್ಯಕ್ಷ ರಾಜೇಂದ್ರ ಕೆ. ಉಪಸ್ಥಿತಿಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ನೂತನ ಸಾಲಿನ ನಿಕಟಪೂರ್ವ ಅಧ್ಯಕ್ಷೆಯಾಗಿ ರಶ್ಮಿ ಶೆಟ್ಟಿ, ಕಾರ್ಯದರ್ಶಿಯಾಗಿ ಕಿಶೋರ್ ಆಚಾರ್ಯ, ಕೋಶಾಧಿಕಾರಿಯಾಗಿ ಜೀವಿತಾ ಯತೀಶ್ ಕರ್ಕೆರಾ, ವಿವಿಧ ವಿಭಾಗಗಳ ಉಪಾಧ್ಯಕ್ಷರಾಗಿ ಶ್ರೀನಿವಾಸ ಅರ್ಬಿಗುಡ್ಡೆ, ಉಮೇಶ್ ಪೂಜಾರಿ, ಮನೋಜ್ ಕನಪಾಡಿ, ಕಿರಣ್, ವಚನ್ ಶೆಟ್ಟಿ, ವಿಮಲ ಶ್ರೀನಿವಾಸ್, ಲೇಡಿ ಜೇಸಿ ಸಂಯೋಜಕಿಯಾಗಿ ಬಬಿತಾ ಗಣೇಶ್, ಜೆಜೆಸಿ ಸಂಯೋಜಕರಾಗಿ ಸಂತೋಷ್ ಜೈನ್, ನಿರ್ದೇಶಕರಾಗಿ ವೆಂಕಟೇಶ್, ಅಕ್ಷಯ್, ನಾಗೇಶ್ ಸಜೀಪ, ರವೀಣಾ ಬಂಗೇರ, ಆಶಾಮಣಿ ರೈ, ಶಿವರಾಮ ಮರ್ತಾಜೆ, ನಾರಾಯಣ ಪೆರ್ನೆ, ದೀಪ್ತಿ ರೈ ಆಯ್ಕೆಗೊಂಡರು.