Breaking
23 Mar 2026, Mon

ಪ್ಯಾಂಟ್ ಜೇಬಿನಲ್ಲಿರಿಸಿದ್ದ ಮೊಬೈಲ್ ಬ್ಯಾಟರಿ ಸ್ಪೋಟ: ವ್ಯಕ್ತಿಗೆ ಗಾಯ

ಸುಳ್ಯ: ಮೊಬೈಲ್‌ ಬ್ಯಾಟರಿ ಸ್ಪೋಟಗೊಂಡ ಪರಿಣಾಮ ಕಲ್ಮಕಾರಿನ ಗುರುಪ್ರಸಾದ್ ನಿಡುಬೆ ಅವರ ಕಾಲಿಗೆ ಗಾಯವಾದ ಘಟನೆ ಇಂದು ( ಮಾ. 23) ನಡೆದಿದೆ.

ಒಂದು ವರ್ಷ ಹಿಂದೆ ಖರೀದಿಸಿದ್ದ ಮೊಬೈಲನ್ನು ಗುರುಪ್ರಸಾದ್‌ ಅವರು ಪ್ಯಾಂಟಿನ ಜೇಬಿನೊಳಗೆ ಇರಿಸಿಕೊಂಡಿದ್ದರು. ಈ ವೇಳೆ ಮೊಬೈಲ್‌ ಸ್ಪೋಟಗೊಂಡಿದೆ.

ಪ್ಯಾಂಟ್‌ ಕಿಸೆಯೊಳಗಿದ್ದ ಕಾರಣ ತೊಡೆಯ ಚರ್ಮಕ್ಕೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published. Required fields are marked *