Breaking
23 Mar 2026, Mon

ಓಂಕಾರ ಫ್ರೆಂಡ್ಸ್ (ರಿ.) ಹಾಗೂ ಓಂಕಾರ ಮಹಿಳಾ ಘಟಕ, ಮಧ್ವ — 15ನೇ ವಾರ್ಷಿಕೋತ್ಸವ ಸಂಭ್ರಮ

ಮಧ್ವ: ಓಂಕಾರ ಫ್ರೆಂಡ್ಸ್ (ರಿ.) ಹಾಗೂ ಓಂಕಾರ ಮಹಿಳಾ ಘಟಕ, ಮಧ್ವ ಇದರ 15ನೇ ವಾರ್ಷಿಕೋತ್ಸವವು ಮಾ. 21 ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಓಂಕಾರ ಭಜನಾ ಮಂಡಳಿಯ ಬಾಲ ಭಜಕರಿಂದ ಭಜನಾ ಸೇವೆ, ನಂತರ ಮದ್ವ ಮಂಟಪದಲ್ಲಿ ಕಾಡಬೆಟ್ಟು ಶ್ರೀ ನಾರಾಯಣ ಶಿಬರಾಯರವರ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ನಡೆಯಿತು.

ರಾತ್ರಿ 8:00 ಗಂಟೆಯಿಂದ ಓಂಕಾರ ಭಜನಾ ತಂಡದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಓಂಕಾರ ಫ್ರೆಂಡ್ಸ್ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಪಾದೆಬೆಟ್ಟು ರವರ ಅಧ್ಯಕ್ಷತೆಯಲ್ಲಿ ನಡೆದ
ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಕಾರಿಂಜ ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ವೀರೇಂದ್ರ ಬಿ. ಅಮೀನ್ ವಗ್ಗ ರವರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಂಟ್ವಾಳ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಸಂಘಟನೆಯ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಅಗ್ರಜ ಬಿಲ್ಡರ್ಸ್ ಮಂಗಳೂರು ಮಾಲಕ ಸಂದೇಶ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ, ಕಿಯೋನಿಕ್ಸ್ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ, ಬಂಟ್ವಾಳ ನಗರಾಭಿವೃದಿ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್, ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ , ಬಿಜೆಪಿ ಬಂಟ್ವಾಳ ಮಂಡಲದ ಪ್ರದಾನ ಕಾರ್ಯದರ್ಶಿ ಸುದರ್ಶನ್ ಬಜ, ಯುವವಾಹಿನಿ (ರಿ.) ಬಂಟ್ವಾಳ ಘಟಕ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೆಲು, ಸುರೇಶ್ ಶೆಟ್ಟಿ ಆರ್ ಕೆ ನಿವಾಸ ಮಧ್ವ, ದೀರಜ್ ಆಚಾರ್ಯ ಕಲ್ಲಡ್ಕ, ಬಿಜೆಪಿ ಮಹಿಳಾ ಮೋರ್ಚಾ ಬಂಟ್ವಾಳ ಮಂಡಲ ಕಾರ್ಯದರ್ಶಿ ಹರ್ಷಿಣಿ ಪುಷ್ಪನಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ರೂಪಕಲ ಮಧ್ವ, ಬಿಜೆಪಿ ಯುವ ಮೋರ್ಚಾ ಬಂಟ್ವಾಳ ಮಂಡಲದ ಅಧ್ಯಕ್ಷ ದಿನೇಶ್ ಶೆಟ್ಟಿ ದಂಬೆದಾರ್, ಚಂದ್ರಶೇಖರ ಶೆಟ್ಟಿ ಪುಳಿಮಜಲು, ಓಂಕಾರ ಮಹಿಳಾ ಘಟಕದ ಅಧ್ಯಕ್ಷೆ ವಿಜಯ ಯೋಗೀಶ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಸಾಯಿ ಸುಮಾ ಮಿಥುನ್ ರಾಜ್ ನಾವಡ, ಮೇಜರ್ ಡಾ| ಸುಧಾ ಚಂದ್ರಶೇಖರ್ ಶೆಟ್ಟಿ ಪುಳಿಮಜಲು, ತಿಮ್ಮಪ್ಪ ಮದ್ವ ಹಾಗೂ ಕುಮಾರಿ ಧನ್ಯ ಗೌಡ ಮಧ್ವ ರಾಜಮಾರ್ ಅವರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು.

ಅರ್ಪಣಾ ಸ್ವಾಗತಿಸಿ, ಪ್ರಮೀತ್ ಪೂಜಾರಿ ವಂದಿಸಿದರು. ರಶ್ಮಿ ಸಂದೇಶ್ ರೈ ಹಾಗೂ ಶ್ರೀಮತಿ ಮೇಘಶ್ರೀ ಯಾದೇಶ್ ರೈ ಕಾರ್ಯಕ್ರಮವನ್ನು ನಿರೂಪಿಸಿದರು.

ನಂತರ ಪಿಂಗಾರ ಕಲಾವಿದರು ಬೆದ್ರ ಇವರಿಂದ “ಓಂಕಾರ” ಎಂಬ ತುಳು ನಾಟಕ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *