Breaking
25 Sep 2026, Fri

ಅಳದಂಗಡಿ ವೀರೇಂದ್ರ ಜೈನ್ ಅವರ ತೋಟದಲ್ಲಿ 13 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ

ಬೆಳ್ತಂಗಡಿ: ಅಳದಂಗಡಿ ವೀರೇಂದ್ರ ಜೈನ್ ಎಂಬವರ ತೋಟದಲ್ಲಿ ಸುಮಾರು 13 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪ ಪತ್ತೆಯಾದ ಘಟನೆ ನಡೆದಿದೆ.

ಕಾಳಿಂಗ ಸರ್ಪವನ್ನು ಗಮನಿಸಿದ ಮನೆಯವರು ತಕ್ಷಣ ಲಾಯಿಲದ ಉರಗ ಸಂರಕ್ಷಕ ಸ್ನೇಕ್ ಅಶೋಕ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಧಾವಿಸಿದ ಸ್ನೇಕ್ ಅಶೋಕ್ ಕುಮಾರ್ ಸಾಹಸಮಯವಾಗಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದು , ಸಂರಕ್ಷಿಸಿ , ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

Leave a Reply

Your email address will not be published. Required fields are marked *