Breaking
23 Mar 2026, Mon

ಹಿಂದೂ ರುದ್ರಭೂಮಿಯಲ್ಲಿ ಬೆಂಕಿ ಅವಘಡ: ಮರದ ಪರಿಕರಗಳು ಸುಟ್ಟು ಭಸ್ಮ

ಕಾರ್ಕಳ: ಹಿಂದೂ ರುದ್ರಭೂಮಿಯಲ್ಲಿ ಸಂಗ್ರಹಿಸಿದ್ದ ಮರದ ಪರಕರಗಳಿಗೆ ಬೆಂಕಿ ತಗುಲಿ ಸುಟ್ಟು ಭಸ್ಮವಾದ ಘಟನೆ ಹಿರಿಯಂಗಡಿ ಹಿಂದೂ ರುದ್ರಭೂಮಿಯಲ್ಲಿ ಮಾ. 22 ರಂದು ನಡೆದಿದೆ.

ಹಿರಿಯಂಗಡಿ ಹಿಂದೂ ರುದ್ರಭೂಮಿಯಲ್ಲಿ ಮರದ ಪರಿಕರಗಳಿಗೆ ಬೆಂಕಿ ತಗುಲಿದ್ದು ಬೆಂಕಿಯ ಜ್ವಾಲೆಗಳು ಪಕ್ಕದಲ್ಲಿ ನಿಲ್ಲಿಸಿದ್ದ ಶವಸಂಸ್ಕಾರ ವಾಹನಕ್ಕೂ ತಗುಲಿದೆ ಎನ್ನಲಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಧಾವಿಸಿದ ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಿಯಂತ್ರಣಕ್ಕೆ ತಂದು ಅಪಾರ ಸೊತ್ತುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *