Breaking
6 Aug 2026, Thu

ಅಕ್ರಮ ಗ್ಯಾಸ್ ಮರುಪೂರಣ: ಇಬ್ಬರು ಆರೋಪಿಗಳು ಬಂಧನ

ಮಂಗಳೂರು: ಗ್ಯಾಸ್ ಸಿಲಿಂಡರ್‌ಗಳಿಂದ ಅಕ್ರಮವಾಗಿ ಮರುಪೂರಣ ಮಾಡುತ್ತಿದ್ದ ಇಬ್ಬರನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ದಿನೇಶ್ ಸಾಲಿಯಾನ್ ಮತ್ತು ಸುನೀಲ್ ನಾಯಕ್ ಎಂದು ಗುರುತಿಸಲಾಗಿದೆ.

ನಗರದ ನ್ಯೂಚಿತ್ರಾ ಜಂಕ್ಷನ್‌ನಿಂದ ಬಸವನಗುಡಿ ಲಕ್ಷ್ಮೀನಾರಾಯಣ ದೇವಸ್ಥಾನ ಕಡೆಗೆ ಕಂಡತ್‌ಪಳ್ಳಿ ರಸ್ತೆ ಭಾಗದಲ್ಲಿರುವ ಗ್ಯಾಸ್ ಪಾಯಿಂಟ್ ಸಮೀಪದ ಗೋದಾಮಿನಲ್ಲಿ ಆರೋಪಿಗಳು ಅಕ್ರಮವಾಗಿ ಗ್ಯಾಸ್ ಸಿಲಿಂಡರ್‌ಗಳನ್ನು ಸಂಗ್ರಹಿಸಿ, ದೊಡ್ಡ ಸಿಲಿಂಡರ್‌ನಿಂದ ಸಣ್ಣ ಸಿಲಿಂಡರ್‌ಗೆ ಮರುಪೂರಣ ಮಾಡುತ್ತಿದ್ದರು. ಈ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರನ್ನು ಬಂಧಿಸಿದ್ದಾರೆ.

ಈ ಕುರಿತು ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *