Breaking
22 Jun 2026, Mon

ಅರಾಟೆ ಸೇತುವೆ ಬಳಿ ದುರಂತ: ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು

ಕುಂದಾಪುರ: ಅರಾಟೆ ಸೇತುವೆ ಸಮೀಪದ ನದಿಯಲ್ಲಿ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಹಂಗಳೂರು ನಿವಾಸಿ ಚಂದ್ರ (39) ಎಂದು ಗುರುತಿಸಲಾಗಿದೆ.

ಮಾ. 17 ರಂದು ಚಂದ್ರ ಅವರು ತಮ್ಮ ಸಂಬಂಧಿಕ ಅಜಿತ್ ಅವರೊಂದಿಗೆ ಮರುವಾಯಿ ಸಂಗ್ರಹಿಸಲು ಅರಾಟೆ ಸೇತುವೆ ಸಮೀಪದ ನದಿಗೆ ತೆರಳಿದ್ದರು. ಈ ವೇಳೆ ಮರುವಾಯಿ ಹೆಕ್ಕುತ್ತಿದ್ದಾಗ ಚಂದ್ರ ಅವರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಕೂಡಲೇ ಅಜಿತ್ ಸುತ್ತಮುತ್ತ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ಚಂದ್ರ ಅವರ ಸುಳಿವು ಸಿಕ್ಕಿರಲಿಲ್ಲ.

ಮಾ. 18 ರಂದು ಬೆಳಿಗ್ಗೆ ಮತ್ತೆ ಹುಡುಕಾಟ ನಡೆಸಿದಾಗ ಅರಾಟೆ ಸೇತುವೆ ಸಮೀಪದಲ್ಲೇ ಚಂದ್ರ ಅವರ ಮೃತದೇಹ ನದಿಯಲ್ಲಿ ತೇಲುತ್ತಿರುವುದು ಕಂಡುಬಂದಿದೆ.

ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *