ಉಡುಪಿ: ಸ್ಕೂಟರ್ ಮತ್ತು ಬೈಕ್ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಮಾ.08 ರಂದು ಕಾಪುವಿನಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಅದಮಾರು ಕಾಲೇಜ್ ಬಳಿಯ ನಿವಾಸಿ, ಸೂರಜ್(23) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಅಧೀಶ್ ಮತ್ತು ಕೊಪ್ಪಲಂಗಡಿ ನಿವಾಸಿ ಉಮೇಶ್ ಎಂದು ತಿಳಿದುಬಂದಿದೆ.

ಮಾ. 08 ರಂದು ಕಟಪಾಡಿಗೆ ತೆರಳಿ ಅಲ್ಲಿಂದ ಅದಮಾರಿನ ತನ್ನ ಮನೆಗೆ ವಾಪಾಸ್ಸಾಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಕೆ -1 ಹೋಟೆಲ್ ಜಂಕ್ಷನ್ ಬಳಿ ಈ ಅಪಘಾತ ಸಂಭವಿಸಿದೆ.

ಅಪಘಾತದ ತೀವ್ರತೆಗೆ ರಸ್ತೆಗೆ ಬಿದ್ದ ಸ್ಕೂಟರ್ ಸವಾರ ಉಮೇಶ್ ಮತ್ತು ಬೈಕ್ ಸವಾರ ಸೂರಜ್ ಗಂಬೀರ ಗಾಯಗೊಂಡಿದ್ದು, ಸಹಸವಾರ ಆದೀಶ್ ಸಣ್ಣ ಪುಟ್ಟ ಗಾಯಗೊಂಡಿದ್ದರು. ಅವರನ್ನು ತಕ್ಷಣವೇ ಸ್ಥಳೀಯರು ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡ ಸೂರಜ್ ಅವರು ಚಿಕಿತ್ಸೆ ಫಲಿಸದೆ ಮಾ. 09 ರಂದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




