Breaking
25 Apr 2026, Sat

ಬಡವರ ಬಂಧು ಸೇವಾ ಟ್ರಸ್ಟ್ (ರಿ.) ಕುಕ್ಕಿಪಾಡಿ ಇದರ ತೃತೀಯ ವರ್ಷದ ಸೇವಾ ಯೋಜನೆ ಹಸ್ತಾಂತರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ : ಬಡವರ ಬಂಧು ಸೇವಾ ಟ್ರಸ್ಟ್ (ರಿ.) ಕುಕ್ಕಿಪಾಡಿ ಇದರ ತೃತೀಯ ವರ್ಷದ ವಾರ್ಷಿಕೋತ್ಸವ ಹಾಗೂ ಫಲಾನುಭವಿಗಳಿಗೆ ಸೇವಾ ಯೋಜನೆ ಹಸ್ತಾಂತರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ದುರ್ಗಾಪಾಶಾಂಕುಷಧಾರಿಣಿ ಕ್ಷೇತ್ರ ನೇಲ್ಯಕುಮೇರು ಕುಕ್ಕಿಪಾಡಿಯಲ್ಲಿ ಇಂದು ನಡೆಯಿತು.

ಕ್ಷೇತ್ರದ ಧರ್ಮದರ್ಶಿ ರಮೇಶ್ ಪಂಡಿತ್, ಲಿಂಗಪ್ಪ ಪೂಜಾರಿ ಹಲಾಯಿ, ವಿಶ್ವನಾಥ ಪಂಡಿತ್, ರಾಜೇಂದ್ರ ಸಾಲಿಯಾನ್ ಹಲಾಯಿ, ಶಿವಪ್ಪ ಪೂಜಾರಿ ಕೊಂಡಬೆಟ್ಟು , ವಕೀಲರಾದ ಪ್ರಮೋದ್ ಕೆಂತಲೆ, ಪೂವಪ್ಪ ಪೂಜಾರಿ ನೇಲ್ಯಕುಮೇರು, ಲಾದ್ರು ಮಿನೇಜಸ್, ಚೇತನ್ ಕುಮಾರ್ ಪುತ್ತೂರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಗುರುರಾಜ್ ಕುಕ್ಕಿಪಾಡಿ, ಕಾರ್ಯದರ್ಶಿ ಪ್ರದೀಪ್ ಕುಕ್ಕಿಪಾಡಿ, ಕೋಶಾಧಿಕಾರಿ ವಿಮಲಾ, ಟ್ರಸ್ಟಿಗಳಾದ ಹರೀಶ್ ಪೂಜಾರಿ ಕುದ್ಕೋಳಿ, ಸುಂದರ ಪೂಜಾರಿ ಕುದ್ಕೋಳಿ, ಹರೀಶ್ ಪೂಜಾರಿ ನೇಲ್ಯಕುಮೇರು, ಕಾಸಿಂ ಮಾದುಕುಮೇರು, ವಿವಿಧ ಸಮಿತಿಯ ಸಂಚಾಲಕರು, ಸದಸ್ಯರು ಉಪಸ್ಥಿತರಿದ್ದರು.

ಎಪ್ರಿಲ್ 11, 2026 ಶನಿವಾರ ಕುಕ್ಕಿಪಾಡಿ – ನೇಲ್ಯಕುಮೇರು ಮೈದಾನದಲ್ಲಿ ಕಾರ್ಯಕ್ರಮನಡೆಯಲಿದ್ದು ಆಯ್ದ ಫಲಾನುಭವಿಗಳಿಗೆ ಸೇವಾ ಯೋಜನೆ ಹಸ್ತಾಂತರ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ, ಸಂಘ ಸಂಸ್ಥೆಗಳಿಗೆ ಗೌರವಾರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಗೀತ ರಸಮಂಜರಿ, ಸ್ಟಾಂಡ್ ಅಪ್ ಕಾಮಿಡಿ, ನೃತ್ಯ ಪ್ರದರ್ಶನ, ತೆಲಿಕೆದ ಕಲಾವಿದೆರ್ ಕೊಯಿಲ ತಂಡದ ಕಲಾವಿದರಿಂದ ” ಎನ್ನಿನೇ ಬೇತೆ ” ನಾಟಕ ಪ್ರದರ್ಶನ ನಡೆಯಲಿದೆ.

Leave a Reply

Your email address will not be published. Required fields are marked *