Breaking
6 Aug 2026, Thu

ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರದಲ್ಲಿ ನಾಗ ಸಾನಿಧ್ಯದ ಜೀರ್ಣೋದ್ಧಾರದ ಶಿಲಾನ್ಯಾಸ

ಕಣಿಯೂರು: ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರದ ನಾಗ ಸಾನಿಧ್ಯದ ಜೀರ್ಣೋದ್ಧಾರದ ಅಂಗವಾಗಿ ಇಂದು(ಮಾ. 6) ಪರಮ ಪೂಜ್ಯ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಬಹ್ಮಶ್ರೀ ವೇದಮೂರ್ತಿ ನಡಿಬೖಲು ಶ್ರೀ ಶಂಕರನಾರಾಯಣ ಭಟ್ ಇವರ ನೇತೃತ್ವದಲ್ಲಿ ಶ್ರೀ ನಾಗ ದೇವರು, ಶ್ರೀ ರಕ್ತೇಶ್ವರಿ ಪರಿವಾರ ದೇವರ ಶಿಲಾನ್ಯಾಸ ಕಾರ್ಯಕ್ರಮವು 10.44 ರ ವೃಷಭ ಲಗ್ನ ಶುಭ ಮುಹೂರ್ತದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು ಅಳಿಕೆ, ಡಾ| ರಾಮಚಂದ್ರ ಭಟ್ ಶ್ರೀ ಮಾತಾ ಕನ್ಯಾನ, ಹಾಗೂ ಭಕ್ತ ಬಾಂಧವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *