Breaking
25 Apr 2026, Sat

PGRSS ಪಂಚಾಯತ್ ಗ್ರಾಮೀಣಾಭಿವೃದ್ಧಿ ಮತ್ತು ರೈತರ ಸೇವಾ ಸಮಿತಿ ಹಾಗೂ ಲಯನ್ ಕ್ಲಬ್ ಆಫ್ ಮೈಸೂರು, ಎಲೈಟ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ

ಬೆಳ್ತಂಗಡಿ: ಪಂಚಾಯತ್ ಗ್ರಾಮಾಭಿವೃದ್ಧಿ ಮತ್ತು ರೈತರ ಸೇವಾ ಸಮಿತಿ ಮತ್ತು ಪಿಜಿ ಆರ್ ಎಸ್ ಎಸ್ ನಿರಾಶ್ರಿತರ ಮತ್ತು ವೃದ್ಧರ ಬೃಂದಾವನ ಹಾಗೂ ನಾರಾಯಣ ಹೃದಯದಲ್ಲಿ ಆಸ್ಪತ್ರೆ, ಅನ್ನಪೂರ್ಣ ಕಣ್ಣಿನ ಆಸ್ಪತ್ರೆ, ಲಯನ್ ಕ್ಲಬ್ ಆಫ್ ಮೈಸೂರು, ಎಲೈಟ್ ಪಂಚಾಯತ್ ವಾರ್ತೆ ಪ್ರತಿಕ್ರಿಯೆ ಹಾಗೂ ಇಲವಾಲ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಪಂಚಾಯಿತಿ ಎದುರುಗಡೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಕಣ್ಣಿನ ತಪಾಸಣಾ ಶಿಬಿರವು ನಡೆಯಿತು.

ಕಾರ್ಯಕ್ರಮವನ್ನು ಇಲವಾಲ ಗ್ರಾಮ ಪಂಚಾಯಿತಿಯ PDO ಹೇಮಂತ್ ಹಾಗೂ ಕಾರ್ಯದರ್ಶಿಯಾದ ಕುಮಾರ್ ಅವರು ಉದ್ಘಾಟನೆ ಮಾಡಿದರು.

ಈ ವೇಳೆ ಲಯನ್ಸ್ ಕ್ಲಬ್ ತಂಡದ ವತಿಯಿಂದ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. ಹಾಗೂ ಕಾರ್ಯ ಕ್ರಮವನ್ನು ಬಹಳ ಯಶಸ್ವಿಯಾಗಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ PGRSS ಪಂಚಾಯತ್ ಗ್ರಾಮೀಣ ಅಭಿವೃದ್ಧಿ ರೈತರ ಸೇವಾ ಸಮಿತಿಯ ಅಧ್ಯಕ್ಷರಾದ ಯಾದವ್ ಹರೀಶ್ ಸಹಕಾರದರ್ಶಿ ಅಶ್ವಿನಿ ಖಜಾಂಚಿ ಮಂಜುಳಾ ಮೇಡಂ ರಾಜ್ಯ ಸಂಚಾಲಕರಾದ ರಕ್ತದಾನಿ ಮಂಜು ಕಂಪ್ಯೂಟರ್ ಆಪರೇಟರ್ ಹರಣಿ, ಹರ್ಷ, ಲಯನ್ ಚಂದ್ರಶೇಖರ, ಅಧ್ಯಕ್ಷರುಗಳಾದ ಲಯನ್ ಸುನಿತಾ ಚಂದ್ರಶೇಖರ, ಲಯನ್ ಹೇಮತ್ ಕುಮಾರ್, ಲಯನ್ ಸುರೇಶ ಬಿ.ಕೆ, ಕಾರ್ಯದರ್ಶಿಗಳಾದ ಲಯನ್ ಮೇಠಿ, ಲಯನ್ ಅಪ್ಸರ ಮೇಠಿ ಮತ್ತು 500ಕ್ಕೂ ಹೆಚ್ಚು ಸಾರ್ವಜನಿಕರು ಉಚಿತ ಆರೋಗ್ಯ ತಪಾಸಣೆಗೆ ಭಾಗವಹಿಸಿದರು.

Leave a Reply

Your email address will not be published. Required fields are marked *