Breaking
5 Mar 2026, Thu

ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ನಿಂದ 3 ಅಶಕ್ತರಿಗೆ ಧನ ಸಹಾಯ ಹಸ್ತಾಂತರ

ಬಂಟ್ವಾಳ: ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ವತಿಯಿಂದ ಸಾರಣೆ ಕೆಲಸ ಮಾಡುತ್ತಿರುವ ವೇಳೆ ಬಿದ್ದು ಬೆನ್ನುಮೂಳೆ ಮುರಿತಕ್ಕೊಳಗಾಗಿರುವ ಮೂಡಿಗೆರೆ ಮಾವಿನಕೆರೆ ಗಂಗನಕೂಡಿಗೆ ನಿವಾಸಿ ಸುರೇಶ್ ಮತ್ತು ಎಲುಬು ಖಾಯಿಲೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕು ಮಾಣಿ ಕೋಚಪಳಿಕೆಯ ಮೋನಪ್ಪ ಕುಲಾಲ್ ಇವರ ಚಿಕಿತ್ಸೆಗೆ ತಲಾ15,000 ರೂಪಾಯಿಯ ಆರ್ಥಿಕ ಸಹಾಯ ಹಾಗೂ ತೆಂಗಿನ ಮರದಿಂದ ಬಿದ್ದು ಬೆನ್ನುಮೂಳೆ ಮುರಿತಕ್ಕೊಳಗಾಗಿರುವ ವಿಟ್ಲ ಕಸಬದ ಮರ್ಮ ಕಂಪೌಂಡ್ ನ ರವೀಂದ್ರರವರ ಚಿಕಿತ್ಸೆಗೆ 10,000 ರೂಪಾಯಿಯ ಧನ ಸಹಾಯವನ್ನು ಬಿ.ಸಿ ರೋಡ್ ನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ನ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *