ಬಂಟ್ವಾಳ : ಬಡವರ ಬಂದು ಸೇವಾ ಟ್ರಸ್ಟ್ (ರಿ.) ಕುಕ್ಕಿಪಾಡಿ ಇದರ ಲೋಗೋ ಅನಾವರಣ ಕಾರ್ಯಕ್ರಮ ಹಾಗೂ 3ನೇ ವರ್ಷದ ವಾರ್ಷಿಕೋತ್ಸವದ ಪೂರ್ವಭಾವಿ ಸಭೆ ಇಂದು ಕುಕ್ಕಿಪಾಡಿ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಟ್ರಸ್ಟ್ ನ ನೂತನ ಲೋಗೋವನ್ನು ಉದ್ಯಮಿ ನಿತ್ಯಾನಂದ ಪೂಜಾರಿ ಕೆಂತಲೆ, ಲಿಂಗಪ್ಪ ಪೂಜಾರಿ ಹಲಾಯಿ, ರಮೇಶ್ ಪಂಡಿತ್, ಲಾದ್ರು ಮಿನೇಜಸ್ ಅನಾವರಣಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕುಕ್ಕಿಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶೇಖರ್ ಶೆಟ್ಟಿ, ರಾಜೇಂದ್ರ ಸಾಲಿಯಾನ್ ಹಲಾಯಿ , ಯೋಗೀಶ್ ಆಚಾರ್ಯ ಎಲ್ಪೇಲು , ನಿವೃತ್ತ ಯೋಧರಾದ ರಾಜು ಪೂಜಾರಿ ಹಲಾಯಿ, ಪ್ರವೀಣ್ ಪೂಜಾರಿ ಹಲಾಯಿ, ಟೀಮ್ ಒಳಿತು ಮಾಡು ಮನುಷ ಸೇವಾ ತಂಡದ ಚೇತನ್ ಕುಮಾರ್ ಪುತ್ತೂರು, ಅನಿಲ್ ಡಿಸೋಜ , ಮೋಹಿನಿ ಆಚಾರ್ಯ ಎಲ್ಪೇಲು, ಬೇಬಿ ಸೇಸಪ್ಪ, ಟ್ರಸ್ಟಿಗಳಾದ ಹರೀಶ್ ಪೂಜಾರಿ ಕುದ್ಕೋಳಿ, ಸುಂದರ ಪೂಜಾರಿ ಕುದ್ಕೋಳಿ, ಹರೀಶ್ ಪೂಜಾರಿ ನೇಲ್ಯಕುಮೇರು, ಕಾಸಿಂ ಮಾದುಕುಮೇರು , ವಿಮಲಾ ನೇಲ್ಯಕುಮೇರು ಅಲ್ಲದೇ ಊರಿನ ಪ್ರಮುಖರು ಉಪಸ್ಥಿತರಿದ್ದರು.

ಎಪ್ರಿಲ್ 11, 2026 ರಂದು ನಡೆಯುವ 3 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಆಯ್ದ ಪಲಾನುಭವಿಗಳಿಗೆ ಸೇವಾ ಯೋಜನೆ ಹಸ್ತಾಂತರ ಕಾರ್ಯಕ್ರಮದ ಸಮಿತಿ ರಚನೆ ಮಾಡಲಾಯಿತು.ಟ್ರಸ್ಟ್ ನ ಸ್ಥಾಪಕಾಧ್ಯಕ್ಷರಾದ ಗುರುರಾಜ್ ಕುಕ್ಕಿಪಾಡಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಪ್ರದೀಪ್ ಕುಕ್ಕಿಪಾಡಿ ಕಾರ್ಯಕ್ರಮ ನಿರೂಪಿಸಿದರು.




