ಕಾಸರಗೋಡು: ಶಾರ್ಟ್ ಸರ್ಕ್ಯೂಟ್‌ನಿಂದ ಸ್ಕೂಟರ್‌ಗೆ ಬೆಂಕಿ ತಗುಲಿದ ಘಟನೆ ಅಣಂಗೂರಿನಲ್ಲಿ ನಡೆದಿದೆ.

ಪರವನಡ್ಕದ ಕೆ. ಸುರೇಶ್ ಅವರಿಗೆ ಸೇರಿದ ಸ್ಕೂಟರ್ ಇದಾಗಿದ್ದು, ಬ್ಯಾಟರಿ ದೋಷದ ಹಿನ್ನೆಲೆಯಲ್ಲಿ ಸರ್ವೀಸ್ ಕೇಂದ್ರದಲ್ಲಿ ದುರಸ್ತಿಗೆ ಇಡಲಾಗಿತ್ತು. ಈ ವೇಳೆ ಸ್ಕೂಟರ್ ಬೆಂಕಿಗಾಹುತಿಯಾಗಿದೆ.
ಘಟನಾ ಸ್ಥಳಕ್ಕೆ ಕಾಸರಗೋಡಿನಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.







