Breaking
5 Aug 2026, Wed

ಕಲಾತ್ಮಕ ಜಗತ್ತಿನ “ನಾರಿ ನಿನಗೊಂದು ಸಾರಿ” ಫೋಟೋ ಸ್ಪರ್ಧೆ–2026: ಫಲಿತಾಂಶ ಪ್ರಕಟ

ಬಂಟ್ವಾಳ: ನಾಗೇಶ್ ಬೆಳ್ಳಾರೆ ನೇತೃತ್ವದ ಕಲಾತ್ಮಕ ಜಗತ್ತು ಆಯೋಜನೆಯ ʼ ನಾರಿ ನಿನಗೊಂದು ಸಾರಿ ಫೋಟೋ ಸ್ಪರ್ಧೆ -2026 ಯಶಸ್ವಿಯಾಗಿ ನಡೆದಿದ್ದು ಇದರ ಫಲಿತಾಂಶ ಪ್ರಕಟಗೊಂಡಿದೆ.

ಈ ಸ್ಪರ್ಧೆಯಲ್ಲಿ ಎರಡು ವಿಭಾಗಗ ಳಾಗಿ ವಿಂಗಡಿಸಲಾಗಿದ್ದು, ಈ ಸ್ಪರ್ಧೆಯ ತೀರ್ಪುಗಾರಿಕೆಯನ್ನು ದೂರದರ್ಶನ ಚಂದನ ವಾಹಿನಿಯ ನಿರೂಪಕಿ ಚೈತ್ರ ರಾಜೇಶ್ ಕೋಟ ವಹಿಸಿಕೊಂಡಿದ್ದರು.

ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪ್ರೀತಿ ಶ್ರೀಧರ್ ಕುಂದಾಪುರ ಹಾಗೂ ದ್ವಿತೀಯ ಸ್ಥಾನವನ್ನು ಸೌಮ್ಯ ಬಜ್ಪೆ ಅವರು ಪಡೆದುಕೊಂಡಿದ್ದಾರೆ.

ಮಕ್ಕಳ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ದಕ್ಷಿ ಪಿಕೆ ಉಜಿರೆ ಹಾಗೂ ದ್ವಿತೀಯ ಸ್ಥಾನವನ್ನು ಅಹ್ನಾ ಯು ಗುತ್ತಿಗಾರು ಸುಳ್ಯ ಇವರು ಪಡೆದುಕೊಂಡಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು ನಿಮ್ಮೆಲ್ಲರ ಜೀವನವು ಉಜ್ಜಲವಾಗಲಿ ಎಂದು ಕಲಾತ್ಮಕ ಜಗತ್ತು ಸಂಸ್ಥಾಪಕರಾದ ನಾಗೇಶ್ ಬೆಳ್ಳಾರೆ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *