Breaking
23 Dec 2024, Mon

ಐಬಿಆರ್(ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ) ಸಾಧಕ” ಉಡುಪಿಯ ಆರಾಧನ್ ಪೂಜಾರಿ

ಉಡುಪಿ: ಸಾಧನೆ, ಪ್ರತಿಭೆಗೆ ವಯಸ್ಸಿನ ಅಂತರವಿಲ್ಲ, ಅದು ಯಾರೊಬ್ಬರ ಸ್ವತ್ತಲ್ಲ ಸರಿಯಾದ ಸಮಯದಲ್ಲಿ ಪ್ರತಿಭೆಗೆ ಸರಿಯಾದ ಪ್ರೋತ್ಸಾಹ ದೊರೆತರೆ ಏನನ್ನು ಬೇಕಾದರೂ ಸಾಧಿಸಬಹುದು. ಈ ಮಾತನ್ನ ನಿಜ ಮಾಡಿ ತೋರಿಸಿದ್ದಾರೆ ಉಡುಪಿಯ ಪುಟ್ಟ ಬಾಲಕ ಆರಾಧನ್ ಪೂಜಾರಿ.

ರಾಘವೇಂದ್ರ ಪೂಜಾರಿ ಹಾಗೂ ಶೈಲಜಾ ದಂಪತಿಗಳ ಆರು ವರ್ಷದ ಈ ಪುಟ್ಟ ಬಾಲಕ 50 ದೇಶಗಳು, 7 ಖಂಡಗಳು, 8 ಗ್ರಹಗಳು, 48 ಏಷ್ಯಾದ ದೇಶಗಳ ರಾಜಧಾನಿಗಳೊಂದಿಗೆ, ಭಾರತದ 28 ರಾಜ್ಯಗಳು, 8 ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಪಠಿಸುವ ಮೂಲಕ ‘ಐಬಿಆರ್ ಸಾಧಕ’ ಎಂದು ಬಿರುದು ಪಡೆದಿದ್ದಾರೆ.

ಅಷ್ಟೇ ಅಲ್ಲದೆ ಈ ಬಾಲಕ , 19 ಭಾರತ ರತ್ನ ಪ್ರಶಸ್ತಿ ಪುರಸ್ಕೃತರು ಮತ್ತು 5 ಸಾಗರಗಳು ಹೆಸರನ್ನು ನಿರ್ಗಲವಾಗಿ ಹೇಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇದೀಗ ಈ ಪುಟ್ಟ ಪೋರನ ಪ್ರತಿಭೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನ ಸಾಧಕ ಪ್ರಶಸ್ತಿ ದೊರಕಿದೆ.

Leave a Reply

Your email address will not be published. Required fields are marked *