ಬಂಟ್ವಾಳ: ತಾಲೂಕಿನ ಸಿದ್ದಕಟ್ಟೆ ಕರ್ಪೆ ನಿವಾಸಿ ಸಂತೋಷ್ ಪೂಜಾರಿ ಅವರ ನಾಲ್ಕು ವರ್ಷದ ಪುತ್ರ ಸಾರ್ಥಕ್ ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ವೈದ್ಯಕೀಯ ವೆಚ್ಚಕ್ಕಾಗಿ ಪಂಜಿಕಲ್ಲು ಬಾಲೇಶ್ವರ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿಯ ವರ್ಷಾವಧಿ ಜಾತ್ರೋತ್ಸವದಂದು ನಡೆಸಿದ ಭವತಿ ಭಿಕ್ಷಾಂದೇಹಿ ನಿಧಿ ಸಂಗ್ರಹ ಮಾಡಲಾಯಿತು.

ಈ ನಿಧಿ ಸಂಗ್ರಹದಲ್ಲಿ ಸಂಗ್ರಹವಾದ 75,607/- ರೂ. ಗಳನ್ನು ಫೆ. 22 ರಂದು ಶ್ರೀ ಕ್ಷೇತ್ರ ಪಂಜಿಕಲ್ಲು ಗರಡಿ ಇಲ್ಲಿ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಪಂಜಿಕಲ್ಲು ಗರಡಿಯ ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರಕಾಶ್ ಕುಮಾರ್ ಜೈನ್ ಪಿರ್ದೊಟ್ಟು ಗುತ್ತು, ಜೀರ್ಣೋದ್ದಾರ ಸಮಿತಿಯ ಕೋಶಾಧಿಕಾರಿ ಜಯ ಕುಂದರ್, ಜೀರ್ಣೋದ್ದಾರ ಸಮಿತಿಯ ಸದಸ್ಯರಾದ ಕೇಶವ ಪೂಜಾರಿ ಅಸಲ್ದೋಡಿ ಮತ್ತು ಗಣೇಶ್ ಪ್ರಭು ಬಾವಂತಬೆಟ್ಟು ಹಾಗೂ ಟ್ರಸ್ಟ್ ನ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.







