Breaking
24 Feb 2026, Tue

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದ ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ವಿದ್ಯಾರ್ಥಿವೇತನ, ವೃದ್ಧಾಪ್ಯ ಪಿಂಚಣಿ, ಮರಣ ಹಾಗೂ ಇತರ ಸಹಾಯಧನಗಳ ಪಾವತಿ ಆಗದ ದೂರಿನ ಕುರಿತು ಕಾರ್ಮಿಕರ ಕುಂದುಕೊರತೆ ಸಭೆಯು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ನಡೆಯಿತು.

ಸಭೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್ ಹಾಗೂ ಬೆಳ್ತಂಗಡಿ ಪ್ರಭಾರ ಕಾರ್ಮಿಕ ನಿರೀಕ್ಷಕರಾದ ವೀರೇಂದ್ರ ಕಂಬಾರ್ ಭಾಗವಹಿಸಿದ್ದರು.

ಹಲವಾರು ಕಾರ್ಮಿಕರು ವೃದ್ಧಾಪ್ಯ ಪಿಂಚಣಿ, ಮದುವೆ ಸಹಾಯಧನ, ಮರಣ ಸಹಾಯಧನ, ಕುಟುಂಬ ಪಿಂಚಣಿ ಹಾಗೂ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ಸಿಗದಿರುವ ಕುರಿತು ಶಾಸಕರಿಗೆ ದೂರು ನೀಡಿದರು.

ಈ ವೇಳೆ ಶಾಸಕರು ಸಮಸ್ಯೆಗಳ ಕುರಿತು ವಿವರವಾಗಿ ಮಾಹಿತಿ ಪಡೆದು, ಕಾರ್ಮಿಕ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಂಡು ಪರಿಹಾರ ಒದಗಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಬಿಎಂಎಸ್‌ನ ರಾಜ್ಯ ಕಾರ್ಯದರ್ಶಿ ಜೈರಾಜ್ ಸಾಲಿಯಾನ್, ಕಾನರ್ಪ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ತಾಲೂಕು ಅಧ್ಯಕ್ಷ ಉದಯ ಬಿ.ಕೆ., ತಾಲೂಕು ಸಂಯೋಜಕ ಶಾಂತಪ್ಪ ಕಲ್ಮಂಜ, ಬಿಎಂಎಸ್ ಪ್ರಮುಖರಾದ ಗಣೇಶ್ ಪೂಜಾರಿ ಪೆರಾಡಿ, ಉದಯ್ ಕುಮಾರ್ ಉಜಿರೆ ಸೇರಿದಂತೆ ಅನೇಕ ಕಾರ್ಮಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *