ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಏಕ ಬಳಕ್ಕ ಪರಿಸರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದ ಘಟನೆ ನಡೆದಿದೆ.

ಲ್ಯಾನ್ಸಿ ಬಳಕ್ಕ ನಿವಾಸಿ ಅಜಿತ್ ಪ್ರಸಾದ್ ರೈ ಮತ್ತು ಉಮೇಶ್ ದೇವಾಡಿಗ ಅವರಿಗೆ ಸೇರಿದ ಗದ್ದೆಯಲ್ಲಿ ಈ ಅವಘಡ ಸಂಭವಿಸಿದೆ.

ಘಟನೆಯಲ್ಲಿ ಲ್ಯಾನ್ಸಿ ಬಳಕ್ಕ ಅವರಿಗೆ ಸೇರಿದ ಗದ್ದೆಯ ಸುಮಾರು 40 ಅಡಿ ಉದ್ದದ ಪಿವಿಸಿ ಪೈಪು ಹಾಗೂ ವೀಳ್ಯದೆಲೆ ಕೃಷಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ..






