Breaking
20 Jun 2026, Sat

ಮನೆಯಲ್ಲಿ ಕುಸಿದು ಬಿದ್ದು 22 ವರ್ಷದ ಯುವಕ ಸಾವು

ಕಾರ್ಕಳ: ಯುವಕನೋರ್ವ ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಕಾರ್ಕಳದ ಯರ್ಲಪಾಡಿ ಎಂಬಲ್ಲಿ ನಡೆದಿದೆ.

ಮೃತಪಟ್ಟವರನ್ನು ಯರ್ಲಪಾಡಿ ಗ್ರಾಮದ ಹೇಮಲತಾ ಎಂಬವರ ಮಗ ಸುಹೇಶ್(22) ಎಂದು ಗುರುತಿಸಲಾಗಿದೆ.

ಕೆಲವು ದಿನಗಳಿಂದ ಕೆಮ್ಮಿನಿಂದ ಬಳಲುತ್ತಿದ್ದ ಅವರು ಔಷಧಿ ಸೇವಿಸುತ್ತಿದ್ದರು ಎಂದು ತಿಳಿದುಬಂದಿದೆ. ಫೆ. 19ರಂದು ಮಧ್ಯಾಹ್ನ ಮನೆಯ ಡೈನಿಂಗ್ ರೂಮ್‌ನ ಕುರ್ಚಿಯಲ್ಲಿ ಕುಳಿತಿದ್ದ ವೇಳೆ ಆಕಸ್ಮಿಕವಾಗಿ ಕುಸಿದು ಬಿದ್ದಿದ್ದಾರೆ.

ತಕ್ಷಣವೇ ಅವರನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *