Breaking
6 Aug 2026, Thu

ಉಪ್ಪುಂದದ ಬಿಜೂರು ಸೇತುವೆಯಲ್ಲಿ ಲಾರಿ ಬೆಂಕಿಗಾಹುತಿ

ಕುಂದಾಪುರ: ಬೈಂದೂರಿನ ಉಪ್ಪುಂದ-ಬಿಜೂರು ರಾಷ್ಟ್ರೀಯ ಹೆದ್ದಾರಿ-66 ಸೇತುವೆಯಲ್ಲಿ ಲಾರಿಯೊಂದು ಆಕಸ್ಮಿಕವಾಗಿ ಬೆಂಕಿಗಾಹುತಿಯಾದ ಘಟನೆ ಫೆ. 19 ರಂದು ನಡೆದಿದೆ.

ಪಶು ಆಹಾರವನ್ನು ಸಾಗಿಸುತ್ತಿದ್ದ ಲಾರಿ ಧಾರವಾಡದಿಂದ ಕುಂದಾಪುರದ ಕಡೆಗೆ ಬರುತ್ತಿದ್ಧಾಗ ಬಿಜೂರು ಸಮೀಪದಲ್ಲಿ ಹಿಂಬದಿಯ ಟಯರ್ ಸ್ಫೋಟಗೊಂಡು ಲಾರಿಗೆ ಬೆಂಕಿ ತಗುಲಿದೆ. ಘಟನೆಯಲ್ಲಿ ಲಾರಿ ಸಹಿತ ಪಶು ಆಹಾರಗಳು ಅಗ್ನಿಗಾಹುತಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಲಾರಿ ಚಾಲಕ ಚಂದ್ರಕಾಂತ್ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *